ರಾಷ್ಟ್ರೀಯ

2016ರ ಐದು ಸುಳ್ಳುಗಳು!

Pinterest LinkedIn Tumblr

fake_news_trending
ಹೊಸ ನೋಟಿನಲ್ಲಿ ಜಿಪಿಎಸ್ ಚಿಪ್’ನ ವ್ಯವಸ್ಥೆಯಿದ್ದು, ಇದನ್ನು ಕಪ್ಪುಹಣವಾಗಿ ಎಲ್ಲೇ ಹುದುಗಿಸಿಟ್ಟರೂ ಪತ್ತೆ ಹಚ್ಚಬಹುದು ಎನ್ನುವ ಸುದ್ದಿಯಂತೂ ಈ ವರ್ಷದಲ್ಲಿ ಸಾಕಷ್ಟು ಸದ್ದು ಮಾಡಿಬಿಟ್ಟಿತು.
ಭಾರತ ಸೋಷಿಯಲ್ ಮೀಡಿಯಾ ಕಂಪನಿಗಳಿಗೆ ಅತಿದೊಡ್ಡ ಮಾರುಕಟ್ಟೆ ಎನ್ನುವುದರಲ್ಲಿ ಎರಡು ಮಾತಿಲ್ಲ. ದೇಶದಲ್ಲಿನ ಕೋಟ್ಯಾಂತರ ಮಂದಿ ಫೇಸ್’ಬುಕ್, ವಾಟ್ಸ್’ಆ್ಯಪ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಈ ಮಾದ್ಯಮವನ್ನು ಬಳಸಿಕೊಂಡು ಸಾಕಷ್ಟು ಅನುಕೂಲಕರ ಮಾಹಿತಿಯ ಜೊತೆಗೆ ಸುಳ್ಳು ಸುದ್ದಿಗಳನ್ನೂ ಹರಡಿಸಲಾಗುತ್ತಿದೆ. ಪ್ರಸಕ್ತ ವರ್ಷ ನೀವು ನಂಬುವಂತೆ ಮಾಡಿದ ಈ ಸುಳ್ಳು-ಸುದ್ದಿಗಳಿವು.
1. ಯುನೆಸ್ಕೋದಿಂದ ನರೇಂದ್ರ ಮೋದಿಯವರನ್ನು ಅತ್ಯುತ್ತಮ ಪ್ರಧಾನಿ ಎಂದು ಘೋಷಣೆ
ಜೂನ್ 2016ರ ವೇಳೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯೂನೆಸ್ಕೋ ಸಂಸ್ಥೆಯು ಜಗತ್ತಿನ ಅತ್ಯತ್ತಮ ಪ್ರಧಾನಿ ಎಂದು ಘೋಷಿಸಲಾಯಿತು ಎಂದು ವಾಟ್ಸ್’ಆ್ಯಪ್ ಗುಂಪುಗಳು ಸೇರಿದಂತೆ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಸದ್ದು ಮಾಡಿತ್ತು. ಆದರೆ ಈ ಸುದ್ದಿ ಸುಳ್ಳು ಎಂದು ಯೂನೆಸ್ಕೋ ಸ್ಪಷ್ಟಪಡಿಸಿದೆ. ಆದರೆ ಈ ಗಾಳಿಸುದ್ದಿ ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ.
2. ಯುನೆಸ್ಕೋದಿಂದ ‘ಜನ-ಗಣ-ಮನ’ ಅತ್ಯತ್ತಮ ರಾಷ್ಟ್ರಗೀತೆ ಎಂದು ಘೋಷಣೆ:
ಈ ಸುಳ್ಳು ಸುದ್ದಿಯಂತೂ 2008ರಿಂದಲೂ ಹರಿದಾಡುತ್ತಲೇ ಇದೆ. ರವೀಂದ್ರನಾಥ್ ಠ್ಯಾಗೋರ್ ರಚಿಸಿದ ಜನ-ಗಣ-ಮನವು ವಿಶ್ವದ ಅತ್ಯುತ್ತಮ ರಾಷ್ಟ್ರಗೀತೆ ಎಂದು ಯುನೆಸ್ಕೋ ಘೋಷಿಸಿದೆ ಎಂಬ ಸುಳ್ಳು ಸುದ್ದಿಯನ್ನು ಓದುವ ಜನರು ಈಗಲೂ ಇದನ್ನು ನಂಬಿದ್ದಾರೆ. 2016ರ ಸ್ವಾತಂತ್ರ್ಯ ದಿನಾಚರಣೆಯ ದಿನವಂತೂ ಈ ಗಾಳಿಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಯುನೆಸ್ಕೋ ಅಧಿಕಾರಿಗಳು, ‘ಭಾರತದಲ್ಲಿ ಹರಿದಾಡುತ್ತಿರುವ ಈ ಗಾಳಿಸುದ್ದಿಯನ್ನು ನಾವೂ ಗಮನಿಸಿದ್ದೇವೆ. ಆದರೆ ರಾಷ್ಟ್ರಗೀತೆಗೆ ಸಂಬಂಧಿಸಿದಂತೆ ಭಾರತ ಮಾತ್ರವಲ್ಲ ಯಾವ ದೇಶದ ರಾಷ್ಟ್ರಗೀತೆಯನ್ನೂ ಅತ್ಯತ್ತಮ ರಾಷ್ಟ್ರಗೀತೆ ಎಂದು ಘೋಷಿಸಿಲ್ಲ ಎಂದಿದ್ದಾರೆ.
3.ಎರಡು ಸಾವಿರ ರೂಪಾಯಿ ನೋಟಿನಲ್ಲಿ ಜಿಪಿಎಸ್ ಚಿಪ್ ಇದೆ:
ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8, 2016ರಂದು ಹಳೆಯ 500, 1000 ರೂಪಾಯಿ ನೋಟುಗಳನ್ನು ಅಮಾನ್ಯ ಮಾಡಿದ ನಂತರ ಹೊಸ ಎರಡು ಸಾವಿರ ರೂಪಾಯಿ ನೋಟು ಪರಿಚಯಿಸಿದ್ದು ನಮಗೆಲ್ಲ ಗೊತ್ತೇ ಇದೆ. ಆದ್ರೆ ಈ ಹೊಸ ನೋಟಿನಲ್ಲಿ ಜಿಪಿಎಸ್ ಚಿಪ್’ನ ವ್ಯವಸ್ಥೆಯಿದ್ದು, ಇದನ್ನು ಕಪ್ಪುಹಣವಾಗಿ ಎಲ್ಲೇ ಹುದುಗಿಸಿಟ್ಟರೂ ಪತ್ತೆ ಹಚ್ಚಬಹುದು ಎನ್ನುವ ಸುದ್ದಿಯಂತೂ ಈ ವರ್ಷದಲ್ಲಿ ಸಾಕಷ್ಟು ಸದ್ದು ಮಾಡಿಬಿಟ್ಟಿತು. ಆದರೆ ಆರ್’ಬಿಐ ಹೊಸ ನೋಟಿನಲ್ಲಿ ಯಾವುದೇ ಚಿಪ್ ಅಳವಡಿಸಿಲ್ಲ ಎನ್ನುವ ಮೂಲಕ ಈ ಗಾಳಿ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿತು.
4. ವಾಟ್ಸ್’ಆ್ಯಪ್ ಪ್ರೋಫೈಲ್ ಚಿತ್ರಗಳನ್ನು ಐಸಿಸ್ ಉಗ್ರರು ಬಳಸಿಕೊಳ್ಳುತ್ತಾರೆ:
ಈ ಮೆಸೇಜನ್ನು ಖಂಡಿತ ನೀವೊಮ್ಮೆಯಾದರೂ ಓದಿರುತ್ತೀರ. ‘ಇದು ದೆಹಲಿ ಪೊಲೀಸರ ಪ್ರಕಟಣೆ. ಸುರಕ್ಷತಾ ಉದ್ದೇಶದಿಂದ ನಿಮ್ಮ ವಾಟ್ಸ್’ಆ್ಯಪ್ ಪ್ರೋಫೈಲ್ ಚಿತ್ರವನ್ನು ಈಗಲೇ ಬದಲಿಸಿಬಿಡಿ. ಇಲ್ಲದಿದ್ದರೇ ಐಸಿಸ್ ಉಗ್ರರು ನಿಮ್ಮ ದಾಖಲೆಗಳನ್ನು ಹ್ಯಾಕ್ ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ವಾಟ್ಸ್’ಆ್ಯಪ್ ಸಿಇಓ ತಮ್ಮ ಬಳಕೆದಾರರಿಗೆ 20-25 ದಿನಗಳ ಮಟ್ಟಿಗೆ ವಾಟ್ಸ್’ಆ್ಯಪ್ ಚಿತ್ರ ಬದಲಿಸುವಂತೆ ಕೇಳಿಕೊಂಡಿದ್ದಾರೆಂಬ ಸುದ್ದಿ ಹರಿದಾಡಿತ್ತು. ಅಂತಿಮವಾಗಿ ದೆಹಲಿ ಪೊಲೀಸ್ ವರಿಷ್ಠಾಧಿಕಾರಿ ಎ.ಕೆ. ಮಿಥಲ್ ಎಂದಿತ್ತು. ಆದರೆ ವಾಸ್ತವ ಏನಪ್ಪ ಅಂದ್ರೆ ದೆಹಲಿ ಪೊಲೀಸ್ ವರಿಷ್ಠಾಧಿಕಾರಿ ಎ.ಕೆ. ವರ್ಮಾ.
5. ಹತ್ತು ರೂಪಾಯಿ ಕಾಯಿನ್ ಕೂಡಾ ಅಮಾನ್ಯ:
500 ಹಾಗೂ 1000 ರೂಪಾಯಿ ಅಮಾನ್ಯ ಮಾಡುವ ಮೊದಲು 10 ರೂಪಾಯಿ ಕಾಯಿನ್ ಅಮಾನ್ಯ ಮಾಡಿ ಆರ್’ಬಿಐ ಆದೇಶ ಹೊರಡಿಸಿದೆ ಎಂದು ಗಾಳಿ ಸುದ್ದಿ ಹರಡಿಸಲಾಗಿತ್ತು. ಸೆಪ್ಟಂಬರ್’ನಲ್ಲಿ ದೆಹಲಿ, ಆಗ್ರ, ಮೀರತ್ ಸುತ್ತ-ಮುತ್ತ ಈ ಆದೇಶ ಹೊರಡಿಸಲಾಗಿತ್ತು. ಈ ಸುದ್ದಿ ಅಂಗಡಿ ವರ್ತಕರಲ್ಲಿ ಸಾಕಷ್ಟು ಗೊಂದಲ ಮೂಡಿಸಿತ್ತು.

Comments are closed.