ರಾಷ್ಟ್ರೀಯ

ಹ್ಯಾಪಿ ನ್ಯೂ ಇಯರ್ ಆಫರ್: ನಿಯಮ ಉಲ್ಲಂಘನೆ ಕುರಿತು ಉತ್ತರಿಸಿ- ಜಿಯೋಗೆ ಟ್ರಾಯ್!

Pinterest LinkedIn Tumblr

jio
ಮುಂಬೈ: 90 ದಿನಗಳ ಕಾಲ ಉಚಿತ ಇಂಟರ್ನೆಟ್ ಪ್ಯಾಕೇಜ್ ಮತ್ತು ವಾಯ್ಸ್ ಕಾಲ್ ಸೇವೆ ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಸೃಷ್ಠಿಸಿರುವ ಜಿಯೋಗೆ ಟ್ರಾಯ್ ಶಾಕ್ ನೀಡಿದೆ.
ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ 90 ದಿನಗಳ ಉಚಿತ ಸೇವೆ ವ್ಯವಸ್ಥೆ ನೀಡಿತ್ತು. ಬಳಿಕ ಹ್ಯಾಪಿ ನ್ಯೂ ಇಯರ್ ವಿಶೇಷ ಸೇವೆ ಒದಗಿಸುವ ಸಲುವಾಗಿ ಉಚಿತ ಸೇವೆಯ ಕಾಲಾವಧಿಯನ್ನು ಮಾರ್ಚ್ ಅಂತ್ಯದವರೆಗೂ ವಿಸ್ತರಿಸಿತ್ತು. ಈ ಸೇವೆ ಕುರಿತಂತೆ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಜಿಯೋಗೆ ಮಾಹಿತಿ ನೀಡುವಂತೆ ಕೇಳಿದೆ. ಇದರಿಂದ ಜಿಯೋ ವೆಲ್ ಕಮ್ ಆಫರ್ ನ ಲಾಭ ಪಡೆಯುತ್ತಿರುವ 63 ಮಿಲಿಯನ್ ಗ್ರಾಹಕರಿಗೆ ಸದ್ಯದಲ್ಲಿಯೇ ಉಚಿತ ಸೇವೆ ಬಂದ್ ಆಗುವ ಸಂಭವವಿದೆ.
ರಿಯಲನ್ಸ್ ಜಿಯೋ ಉಚಿತ ಡೇಟಾ ಹಾಗೂ ಉಚಿತ ಕರೆ ನೀಡುವ ಮೂಲಕ ಟ್ರಾಯ್ ನ ನಿರ್ಬಂಧನೆ ಉಲ್ಲಂಘಿಸಿರುವ ಕಾರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಟ್ರಾಯ್ ಕೇಳಿದ್ದು ಡಿಸೆಂಬರ್ 29ರವರೆಗೆ ರಿಲಯನ್ಸ್ ಕಾಲಾವಕಾಶ ಕೇಳಿತ್ತು.
ಇದರೊಂದಿಗೆ ಜಿಯೋ ನಾಳೆ ತನ್ನ ಅಂತಿಮ ನಿರ್ಧಾರ ಪ್ರಕಟಿಸಲಿದ್ದು ಉಚಿತ ಡೇಟಾ ಹಾಗೂ ಉಚಿತ ಕರೆ ನೀಡುತ್ತಿರುವ ರಿಲಯನ್ಸ್ ಯಾವ ಕ್ರಮಕ್ಕೆ ಮುಂದಾಗಲಿದೆ ಎಂಬುದು ನಾಳೆ ತಿಳಿಯಲಿದೆ.

Comments are closed.