ರಾಷ್ಟ್ರೀಯ

ಅಪ್ಪನಿಲ್ಲದ 236 ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ನೀಡಿದ ಸವನಿ ಗ್ರೂಪ್

Pinterest LinkedIn Tumblr

wedding11

ಸೂರತ್: ಇಲ್ಲಿನ ಸ್ಥಳೀಯ ರಿಯಲ್ ಎಸ್ಟೇಟ್ ಕಂಪನಿಯಾದ ಪಿ ಪಿ ಸವನಿ ಗ್ರೂಪ್ ಸೋಮವಾರ ಸಾಮೂಹಿಕ ವಿವಾಹ ಆಯೋಜಿಸಿ, ಅಪ್ಪನಿಲ್ಲದ 236 ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ನೀಡಿದ್ದಾರೆ.

236 ವಧುಗಳಲ್ಲಿ ಐವರು ಮುಸ್ಲಿಂ ಮತ್ತು ಒಬ್ಬ ಕ್ರಿಶ್ಚಿಯನ್ ವಧು ಇದ್ದಾಳೆ, ಸಾಮೂಹಿಕ ವಿವಾಹದಲ್ಲಿ ಸವನಿ ಗ್ರೂಪ್‍ನ ಕುಟುಂಬದ ಇಬ್ಬರು ಯುವಕರು ಕೂಡಾ ಮದುವೆಯಾಗಿದ್ದಾರೆ.

Five Indian Muslim grooms assemble at a mass wedding of 236 fatherless girls organised by the charitable PP Savani Group in Surat, some 270 km from Ahmedabad, on December 25, 2016. Out of 236 fatherless girls married in the mass wedding event, five were from the Muslim community, and one Christian, with the majority being Hindus.  / AFP PHOTO / SAM PANTHAKY
Five Indian Muslim grooms assemble at a mass wedding of 236 fatherless girls organised by the charitable PP Savani Group in Surat, some 270 km from Ahmedabad, on December 25, 2016.
Out of 236 fatherless girls married in the mass wedding event, five were from the Muslim community, and one Christian, with the majority being Hindus. / AFP PHOTO / SAM PANTHAKY

ಹೀಗೊಂದು ಸಾಮೂಹಿಕ ವಿವಾಹ ಆಯೋಜನೆ ಮಾಡಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ನನ್ನ ಮಗ ಮಿಥುಲ್ ಮತ್ತು ನನ್ನ ಮಾವನ ಮಗ ಜಯ್ ಕೂಡಾ ಇದೇ ಸಮಾರಂಭದಲ್ಲಿ ಮದುವೆಯಾಗಿದ್ದಾರೆ ಎಂದು ಸವನಿ ಗ್ರೂಪ್ ಮಾಲೀಕ ಮಹೇಶ್ ಸವನಿ ಹೇಳಿದ್ದಾರೆ.

ಇಲ್ಲಿ ವಿವಾಹವಾದ ಹೆಣ್ಣು ಮಕ್ಕಳಲ್ಲಿ 5 ಮಂದಿ ಮಹಾರಾಷ್ಟ್ರ, 3 ಮಂದಿ ರಾಜಸ್ತಾನ, ಬಿಹಾರದಿಂದ ಒಬ್ಬರು, ಇನ್ನುಳಿದವರೆಲ್ಲರೂ ಗುಜರಾತ್‍ನವರೇ ಆಗಿದ್ದಾರೆ. ಕನ್ಯಾದಾನದ ವೇಳೆ ನಾವು ಅವರಿಗೆ ಬಟ್ಟೆ, ಆಭರಣ, ಪಾತ್ರೆ ಮತ್ತು 5 ಗೃಹೋಪಕರಣಗಳನ್ನು ನೀಡಿದ್ದೇವೆ ಎಂದು ಮಹೇಶ್ ಹೇಳಿದ್ದಾರೆ.

ಸವನಿ ಕುಟುಂಬವು ಕಳೆದ 5 ವರ್ಷಗಳಿಂದ ಈ ರೀತಿ ಸಾಮೂಹಿಕ ವಿವಾಹ ಆಯೋಜಿಸಿಕೊಂಡು ಬಂದಿದೆ. ಇಲ್ಲಿಯವರೆಗೆ ಅಪ್ಪನಿಲ್ಲದ 708 ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಟ್ಟಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆಯಿದೆ ಅಂತಾರೆ ಮಹೇಶ್.

Comments are closed.