ರಾಷ್ಟ್ರೀಯ

ಪಾಕ್ ಜೈಲಿನಲ್ಲಿದ್ದ 220 ಭಾರತೀಯ ಮೀನುಗಾರರ ಬಿಡುಗಡೆ

Pinterest LinkedIn Tumblr

india-pakistan

ಲಾಹೋರ್: ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ ಬಂಧನಕ್ಕೊಳಪಡಿಸಲಾಗಿದ್ದ 518 ಭಾರತೀಯ ಮೀನುಗಾರರ ಪೈಕಿ 220 ಮೀನುಗಾರರನ್ನು ಪಾಕಿಸ್ತಾನ ಸರ್ಕಾರ ಸೋಮವಾರ ಬಿಡುಗಡೆ ಮಾಡಿದೆ.

ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಹುಟ್ಟುಹಬ್ಬ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದರು. ಇದರ ಬೆನ್ನಲ್ಲೇ ಪಾಕಿಸ್ತಾನ ಇದೀಗ ಬಂಧನಕ್ಕೊಳಗಾಗಿದ್ದ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ.

ಮೀನುಗಾರರ ಬಿಡುಗಡೆ ಕುರಿತಂತೆ ಮಾತನಾಡಿರುವ ಪಾಕಿಸ್ತಾನ ಜೈಲು ಅಧೀಕ್ಷಕ ಹುಸೇನ್ ಸೆಹ್ತೋ ಅವರು, ಅಕ್ರಮವಾಗಿ ಪಾಕಿಸ್ತಾನದ ಸಮುದ್ರದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಭಾರತೀಯ ಮೀನುಗಾರರನ್ನು ಬಂಧನಕ್ಕೊಳಪಡಿಸಲಾಗಿತ್ತು. ಇದೀಗ 220 ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಲಾಗಿದೆ. ವಾಘಾ ಗಡಿಯ ಬಳಿ ಭಾರತೀಯ ಅಧಿಕಾರಿಗಳಿಗೆ ಮೀನುಗಾರರನ್ನು ಒಪ್ಪಿಸಲಾಗುತ್ತದೆ. ಇನ್ನುಳಿದ 2019 ಮೀನುಗಾರರನ್ನು ಮುಂದಿನ ವರ್ಷ ಜನವರಿ 5 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Comments are closed.