ರಾಷ್ಟ್ರೀಯ

ಹೊಸ ವರ್ಷದಿಂದ ಈ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಕ್ಕೆ ಕಾರ್ಡ್ ಕಡ್ಡಾಯ!

Pinterest LinkedIn Tumblr

metro
ನವದೆಹಲಿ(ಡಿ.25): ನೋಟ್ ಬ್ಯಾನ್ ಮೂಲಕ ಲೆಸ್ ಕ್ಯಾಶ್`ನಿಂದ ಕ್ಯಾಶ್ ಲೆಸ್ ಕಡೆಗೆ ಗಮನ ಹರಿಸಿರುವ ಕೇಂದ್ರದ ಆಕಾಂಕ್ಷೆಗೆ ಒತ್ತು ನೀಡುವ ನಿಟ್ಟಿನಲ್ಲಿ ದೆಹಲಿ ಮೆಟ್ರೋ ಸಂಸ್ಥೆ ಮುಂದಾಗಿದೆ. 10 ನಿಲ್ದಾಣಗಳಲ್ಲಿ ಡಿಜಿಟಲ್ ಪೇಮೆಂಟ್ ಮೂಲಕ ಟಿಕೆಟ್ ವಿತರಣೆಯನ್ನ ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ. ಪೇಟಿಎಂ, ಸ್ಮಾರ್ಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್`ಗಳ ಮೂಲಕ ಟಿಕೆಟ್ ನೀಡುವ ವ್ಯಸ್ಥೆ ಮಾಡಲು ಮುಂದಾಗಿದೆ. ಈ ವ್ಯವಸ್ಥೆ ನವೆಂಬರ್ 1ರಿಂದ ಜಾರಿಗೆ ಬರಲಿದೆ.
ಈ ನಿಲ್ದಾಣಗಳ ಪ್ರಯಾಣಿಕರು ಪೇಟಿಎಂ ಮೂಲಕ QR ಕೋಡನ್ನ ನಿಲ್ದಾಣಗಳಲ್ಲಿ ಸ್ಕ್ಯಾನ್ ಮಾಡಬೇಕು. ಇದು ಟೋಕನ್ ವಿತರಕರಿಗೆ ಸಂದೇಶ ರವಾನಿಸುತ್ತದೆ. ಬಳಿಕ ನಿಮಗೆ ಟೋಕನ್ ಸಿಗಲಿದೆ ಎಂದು ಮೆಟ್ರೋ ಎಂಡಿ ಮಂಗು ಸಿಂಗ್ ಹೇಳಿದ್ಧಾರೆ.
ಅತಿ ಹೆಚ್ಚು ಸ್ಮಾರ್ಟ್ ಕಾರ್ಡ್ ಹೊಂದಿರುವವ ಪ್ರಯಾಣಿಕರು ಯಾವ ಯಾವ ನಿಲ್ದಾಣಗಳಲ್ಲಿ ಸಂಚರಿಸುತ್ತಿದ್ದಾರೆ ಎಂಬುದನ್ನ ಪತ್ತೆ ಹಚ್ಚಿ ಅದರ ಅಂಕಿ ಅಂಶದ ಆಧಾರದ ಮೇಲೆ 10 ನಿಲ್ದಾಣಗಳನ್ನ ಆಯ್ಕೆ ಮಾಡಿ ಡಿಜಿಟಲ್ ಪೇಮೆಂಟ್`ಗೆ ಒತ್ತು ನೀಡಲಾಗಿದೆ.

Comments are closed.