ರಾಷ್ಟ್ರೀಯ

ದೇಶದಲ್ಲಿ ಹಣದ ಅಭಾವಕ್ಕೆ ಕಾರಣಗಳೇನು?

Pinterest LinkedIn Tumblr

bank
ನವದೆಹಲಿ: ನೋಟ್‍ಬ್ಯಾನ್ ಬಳಿಕ ದೇಶದಲ್ಲಿ ಹಣದ ಅಭಾವ ಉಂಟಾಗಿದೆ. ಹಣದ ಅಭಾವ ಯಾಕೆ ಉಂಟಾಯಿತು ಎನ್ನುವುದಕ್ಕೆ ಈಗ ವಿಶ್ಲೇಷಣೆಗಳು ಆರಂಭವಾಗಿದ್ದು, ಇಲ್ಲಿ ಕಾರಣಗಳನ್ನು ನೀಡಲಾಗಿದೆ.

– ನವೆಂಬರ್ 8ರಿಂದ ಡಿಸೆಂಬರ್ 19ರ ತನಕ ರಿಸರ್ವ್ ಬ್ಯಾಂಕ್ 220 ಕೋಟಿ ಹೊಸ ನೋಟು ಬ್ಯಾಂಕ್‍ಗಳಿಗೆ ವಿತರಿಸಿದೆ.

– ವಿತರಣೆ ಮಾಡಿದ ನೋಟುಗಳಲ್ಲಿ ಶೇ. 90ರಷ್ಟು 2 ಸಾವಿರ ಮುಖಬೆಲೆಯ ನೋಟುಗಳಾಗಿದ್ದರೆ, ಉಳಿದ ಶೇ.10ರಷ್ಟು 500 ರೂ. ಮುಖಬೆಲೆಯ ನೋಟುಗಳನ್ನು ವಿತರಿಸಿದೆ.

– ಡಿಸೆಂಬರ್ 19ರ ತನಕ ಬಿಡುಗಡೆಯಾದ ಹೊಸ ನೋಟಿನ ಮೌಲ್ಯ 4.07 ಲಕ್ಷ ಕೋಟಿ ರೂ. ಆಗಿದ್ದು ನವೆಂಬರ್ 8ಕ್ಕಿಂತ ಮೊದಲೇ ಆರ್‍ಬಿಐ ಹೊಸ 2 ಸಾವಿರ ಮುಖಬೆಲೆಯ 4.94 ಲಕ್ಷ ಕೋಟಿ ಪ್ರಿಂಟ್ ಮಾಡಿತ್ತು.[ಆರ್‍ಟಿಐ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಆರ್‍ಬಿಐ ಈ ಉತ್ತರವನ್ನು ನೀಡಿದೆ]

– ನವೆಂಬರ್ 8ರ ಬಳಿಕನೂ ಆರ್‍ಬಿಐ ಹೊಸ ನೋಟುಗಳನ್ನು ಪ್ರಿಂಟ್ ಮಾಡಿದೆ. ನೋಟುಬ್ಯಾನ್ ಎರಡು ವಾರಗಳಲ್ಲಿ 4 ಪ್ರಿಂಟಿಂಗ್ ಪ್ರೆಸ್‍ನಲ್ಲಿ 2 ಲಕ್ಷ ಕೋಟಿ ಹೊಸನೋಟು ಪ್ರಿಂಟ್ ಮಾಡಲು ಯೋಜನೆ ಹಾಕಿತ್ತು.

– ದೇಶಕ್ಕೆ 7 ಲಕ್ಷ ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದ್ದು, ನ.8ಕ್ಕಿಂತ ಮುಂಚೆನೇ 4.94 ಲಕ್ಷ ಕೋಟಿ ಹೊಸನೋಟು ಪ್ರಿಂಟ್ ಆಗಿತ್ತು. ಆದರೆ ಡಿಸೆಂಬರ್ 19ರ ತನಕ ಬಿಡುಗಡೆಯಾಗಿರುವುದು ಕೇವಲ 4.07 ಲಕ್ಷ ಕೋಟಿ ಮಾತ್ರ. ಇನ್ನುಳಿದ ಹಣವನ್ನು ಬಿಡುಗಡೆ ಮಾಡಿಲ್ಲ ಯಾಕೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಕೇಂದ್ರ ಸರ್ಕಾರ ಹಾಗೂ ಆರ್‍ಬಿಐ ಉತ್ತರ ನೀಡಿಲ್ಲ.

– ಹೊಸ 500 ರೂ. ನೋಟಿನಲ್ಲಿ ಮುದ್ರಣ ದೋಷ ಕಂಡು ಬಂದ ಬಳಿಕ ಪ್ರಿಂಟ್ ಮಾಡಲಾಗುತ್ತಿಲ್ಲ, ಬೇರೆಡೆಗೆ ಮುದ್ರಿಸಲಾಗುತ್ತಿದೆ. ಹೊಸ ಎರಡು ಮುದ್ರಣಾಲಯಗಳಲ್ಲಿ ಕಳೆದ ಮೂರು ವಾರಗಳಲ್ಲಿ 500 ರೂ. ಹೊಸ ನೋಟು ನಿಧಾನವಾಗಿ ಪ್ರಿಂಟ್ ಆಗುತ್ತಿದೆ.

– ಹೊಸನೋಟು ವಿತರಣೆಗೆ ಹೆಚ್ಚಿನ ಎಟಿಎಂಗಳಲ್ಲಿ ಮರು ಹೊಂದಾಣಿಕೆ ಮಾಡಬೇಕಾಗಿದೆ. ದೊಡ್ಡ ಮಟ್ಟದಲ್ಲಿ ನೋಟುಗಳನ್ನು ಬಿಡುಗಡೆ ಮಾಡಿದರೆ ವಿಪರೀತ ರಷ್ ಆಗುವ ಭೀತಿ ಸರ್ಕಾರಕ್ಕಿದೆ. ಬ್ಯಾಂಕ್‍ಗಳಿಗೂ ಸಮಸ್ಯೆಯಾಗಬಹುದು ಎನ್ನವ ಕಾರಣಕ್ಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

– ಈ ಮೇಲಿನ ಕಾರಣದ ಜೊತೆ ಬ್ಯಾಂಕ್ ಅಧಿಕಾರಿಗಳೇ ಬ್ಲಾಕ್ ಆಂಡ್ ವೈಟ್ ದಂಧೆಯಲ್ಲಿ ಶಾಮೀಲಾಗಿರುವ ಕಾರಣ ಆರ್‍ಬಿಐನಿಂದ ಬಂದಿರುವ ಹಣ ಜನರ ಕೈಗೆ ಸುಲಭವಾಗಿ ಸಿಗುತ್ತಿಲ್ಲ.

Comments are closed.