ರಾಷ್ಟ್ರೀಯ

ಉತ್ತರಪ್ರದೇಶ: ಮುಜಾಫರ್’ನಗರವೊಂದರಲ್ಲೇ ಲಕ್ಷಕ್ಕೂ ಅಧಿಕ ಮಂದಿ ಮತದಾರರ ಪಟ್ಟಿಗೆ!

Pinterest LinkedIn Tumblr

up_election
ಮುಜಾಫರ್’ನಗರ(ಡಿ.24): ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು ಮುಜಾಫರನಗರವೊಂದರಲ್ಲೇ 1,12,746 ಮಂದಿ ನೂತನವಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಮುಜಾಫರ್’ನಗರ ಜಿಲ್ಲೆಯೊಂದರಲ್ಲಿ ಬುಧಾನ, ಪುರ್ಖಾಜಿ,ಕಥೋಲಿ, ಮುಜಾಫರ್’ನಗರ್, ಚಾರ್ಥ್’ವಾಲ್ ಹಾಗೂ ಮೀರ್’ಪುರ್ ಎಂಬ ಆರು ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿದೆ. ಒಟ್ಟು 19,12,228 ಮತದಾರರನ್ನೊಳಗೊಂಡ ಈ ಜಿಲ್ಲೆಯಲ್ಲಿ 10,47026 ಪುರುಷರು, 8,72,039 ಮಂದಿ ಮಹಿಳೆಯರು ಸೇರಿದಂತೆ 163 ತೃತಿಯ ಲಿಂಗಿಗಳು ಈ ಬಾರಿ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಿ.ಕೆ. ಸಿಂಗ್ ಮುಜಾಫರನಗರವೊಂದರಲ್ಲೇ 1614 ಪೋಲಿಂಗ್ ಬೂತ್’ಗಳನ್ನು ತೆರೆಯಲಾಗುವುದು, ಹಾಗೆಯೇ ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ರೀತಿಯ ಸಿದ್ದತೆಯನ್ನೂ ನಡೆಸುತ್ತಿದೆ ಎಂದವರು ತಿಳಿಸಿದ್ದಾರೆ.

Comments are closed.