ರಾಷ್ಟ್ರೀಯ

ಪತ್ನಿಯ ಅಂತ್ಯಸಂಸ್ಕಾರಕ್ಕಾಗಿ ಹಣ ಕೊಡಲು ಬ್ಯಾಂಕ್ ನಿಂದ ನಿರಾಕರಣೆ

Pinterest LinkedIn Tumblr

bank
ಜಾರ್ಖಂಡ್: ನೆರೆಹೊರೆಯವರಿಂದ ಹಣ ಸಂಗ್ರಹಿಸಿ ಪತ್ನಿಯ ಅಂತ್ಯ ಸಂಸ್ಕಾರ ಮಾಡಿದೆ ಎಂದು ಹೇಳುವಾಗ ಆ ಹಿರಿ ಜೀವ ಗದ್ಗದಿತರಾದರು.

ಜಾರ್ಖಂಡ್‍ನ ಲತೇಹಾರ್ ಜಿಲ್ಲೆಯಲ್ಲಿ ನಿವೃತ್ತ ಸರ್ಕಾರಿ ನೌಕರ ಜುಯೇಲ್ ಕುಜೂರ್ ಎಂಬವರು ತಮ್ಮ ಪತ್ನಿಯ ಹೀರಾಮಣಿ ಕುಜೂರ್ ಗುರುವಾರ ಬೆಳಗ್ಗೆ ಮೃತರಾಗಿದ್ದರು. ಪತ್ನಿಯ ಅಂತ್ಯಸಂಸ್ಕಾರ ನೆರವೇರಿಸಲು ಹಣಕ್ಕಾಗಿ ಕುಜೂರ್ ಅವರು ಬ್ಯಾಂಕ್‍ಗೆ ಹೋಗಿದ್ದರು. ಅಂತ್ಯ ಸಂಸ್ಕಾರಕ್ಕಾಗಿ ₹10,000 ವಿತ್‍ಡ್ರಾ ಮಾಡಲು ಹೋದರೆ ಬ್ಯಾಂಕ್ ಹಣ ನೀಡಲು ನಿರಾಕರಿಸಿದೆ.

ಕುಜೂರ್ ಅವರು ಮಹುದಾಂದ್ ಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಖಾತೆಗೆ ಹಣ ವಿತ್‍ಡ್ರಾ ಮಾಡಲು ಹೋಗಿದ್ದರು.
ನನಗೆ ಹಣ ನೀಡಲು ಕ್ಯಾಶಿಯರ್ ನಿರಾಕರಿಸಿದಾಗ ನಾನು ಮ್ಯಾನೇಜರ್ ಬಳಿ ಹೋಗಿ ನನ್ನ ಕಷ್ಟವನ್ನು ಹೇಳಿಕೊಂಡೆ. ಆದರೆ ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ. ನೀವು ಗರಿಷ್ಠ ಮೊತ್ತ ₹4,000 ಅಷ್ಟೇ ವಿತ್‍ಡ್ರಾ ಮಾಡಬಹುದು ಎಂದು ಅವರು ಹೇಳಿದಾಗ ಅವರ ಮಾತನ್ನು ಪಾಲಿಸಲೇಬೇಕಾಯಿತು.

ಬ್ಯಾಂಕ್‍ನಲ್ಲಿ ನಡೆದ ಘಟನೆ ಬಗ್ಗೆ ಊರಿನಲ್ಲಿ ಹೇಳಿದಾಗ ಊರಿನವರೆಲ್ಲರೂ ಹಣ ಸಂಗ್ರಹ ಮಾಡಿ ನೀಡಲು ಮುಂದಾಗಿದ್ದಾರೆ.

ಸುಮಾರು 600 ಮಂದಿ ವಾಸವಾಗಿರುವ ಆ ಊರಿನ ಜನರೆಲ್ಲ ಒಟ್ಟ ಸೇರಿ, ಹೀರಾಮಣಿಯವರ ಅಂತ್ಯ ಸಂಸ್ಕಾರಕ್ಕೆ ಹಣ ಸಂಗ್ರಹ ಮಾಡಿದ್ದಾರೆ.

ನನ್ನ ನೆರೆಮನೆಯವರಿಂದಲೇ ಹಣ ಸಾಲ ಕೇಳೋಣ ಎಂದಿದ್ದೆ. ಆದರೆ ಅವರಲ್ಲಿ ದುಡ್ಡು ಎಲ್ಲಿದೆ? ನಾವು ಬ್ಯಾಂಕ್‍ನಲ್ಲಿರಿಸಿದ ಹಣ ನಮ್ಮ ಅಗತ್ಯಕ್ಕೆ ಸಿಗದೇ ಇದ್ದರೆ ಹೇಗೆ?

ನನ್ನ ಕೈಗೆ ಹಣ ಸಿಕ್ಕಿದ ಕೂಡಲೇ ನನಗೆ ಸಹಾಯ ಮಾಡಿದವರಿಗೆ ಅದನ್ನು ಮರಳಿಸಬೇಕು ಎಂದು ಕುಜೂರ್ ಹೇಳಿದ್ದಾರೆ.

ಏತನ್ಮಧ್ಯೆ, ಬ್ಯಾಂಕ್‍ನಲ್ಲಿ ನಗದು ಕೊರತೆ ಇದ್ದ ಕಾರಣ, ಕುಜೂರ್ ಅವರಿಗೆ 10,000 ಕೊಡಲು ಸಾಧ್ಯವಾಗಿಲ್ಲ ಎಂದು ಎಸ್‍ಬಿಐ ಮಹುದಾಂದ್ ಖಾತೆಯ ಮ್ಯಾನೇಜರ್ ಮನೋಜ್ ಕುಮಾರ್ ಸಿನ್ಹಾ ಹೇಳಿದ್ದಾರೆ.

Comments are closed.