ರಾಷ್ಟ್ರೀಯ

ಕ್ಯಾಬ್ ಚಾಲಕನ ಖಾತೆಗೆ 7 ಕೋಟಿ ಜಮೆ

Pinterest LinkedIn Tumblr

note1
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಹೈದರಾಬಾದ್ ಉಬರ್ ಕ್ಯಾಬ್ ಚಾಲಕರೊಬ್ಬರ ಖಾತೆಗೆ ಬರೊಬ್ಬರಿ ಏಳು ಕೋಟಿ ರುಪಾಯಿ ನಿಷೇಧಿದ ನೋಟ್ ಜಮೆಯಾಗಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ.
ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ನವೆಂಬರ್ ಎರಡನೇ ವಾರದಲ್ಲಿ ಉಬರ್ ಕ್ಯಾಬ್ ಚಾಲಕನ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಖಾತೆಗೆ ಇಬ್ಬರು ವ್ಯಕ್ತಿಗಳು ಹಣ ಜಮೆ ಮಾಡುತ್ತಿರುವ ಬ್ಯಾಂಕ್ ಸಿಸಿಟಿವಿಯಲ್ಲಿ ಸೇರೆಯಾಗಿದೆ.
ಚಾಲಕನ ಖಾತೆಗೆ ಹಣ ಜಮೆಯಾದ ತಕ್ಷಣ ಆರ್ ಟಿಜಿಎಸ್ ಮೂಲಕ ಚಿನ್ನದ ವ್ಯಾಪಾರಿಯೊಬ್ಬರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಈ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ಮಧ್ಯೆ ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಕ್ಯಾಬ್ ಚಾಲಕ ಯಾವುದೇ ಕಾರಣಕ್ಕೂ ಹಣ ಮೂಲದ ಬಗ್ಗೆ ಬಾಯಿ ಬಿಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಅಕ್ರಮವಾಗಿ ಹಣ ಜಮೇ ಮಾಡಿದ ಆ ಇಬ್ಬರು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದ್ದೇವೆ ಮತ್ತು ಅವರ ಹೇಳಿಕೆಯನ್ನು ದಾಖಲಿಸಿದ್ದೇವೆ. ವಿಚಾರಣೆ ವೇಳೆ ಏಳು ಕೋಟಿ ರುಪಾಯಿಗೆ ಕಪ್ಪು ಹಣ ಘೋಷಣೆ ಯೋಜನೆಯಡಿ ಶೇ.50ರಷ್ಟು ತೆರಿಗೆ ಕಟ್ಟಲು ತಾವು ಸಿದ್ಧರಿರುವುದಾಗಿ ತಿಳಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Comments are closed.