ರಾಷ್ಟ್ರೀಯ

‘ಮೋದಿ’ ಮಯವಾದ ಸರ್ಕಾರದ ಹೊಸ ವರ್ಷದ ಕ್ಯಾಲೆಂಡರ್

Pinterest LinkedIn Tumblr

modi
ನವದೆಹಲಿ: ಕೇಂದ್ರ ಸರ್ಕಾರದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು. ಕ್ಯಾಲೆಂಡರ್‍ ನ ಹನ್ನೆರಡು ಪುಟಗಳಲ್ಲಿಯೂ ಪ್ರಧಾನಿ ಮೋದಿಯವರ ಚಿತ್ರ ರಾರಾಜಿಸುತ್ತಿದೆ .

‘ಮೇರಾ ದೇಶ್ ಬದಲ್ ರಹಾ ಹೈ, ಆಗೇ ಬಡ್ ರಹಾ ಹೈ’ ಎಂಬ ಘೋಷವಾಕ್ಯವನ್ನಿಟ್ಟುಕೊಂಡು ಈ ಕ್ಯಾಲೆಂಡರ್‍ ಅನ್ನು ರೂಪಿಸಲಾಗಿದೆ.

ಕ್ಯಾಲೆಂಡರ್‍ ನ ಪ್ರತೀ ತಿಂಗಳ ಪುಟದಲ್ಲಿ ನರೇಂದ್ರ ಮೋದಿಯವರ ಫೋಟೋ ಇದ್ದು ನರೇಂದ್ರ ಮೋದಿಯವರ ಮಾತುಗಳನ್ನು ಉಲ್ಲೇಖಿಸಲಾಗಿದೆ.

ಕ್ಯಾಲೆಂಡರ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಪ್ರಕಟವಾಗಿದ್ದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಕ್ಯಾಲೆಂಡರ್ ಗುರುವಾರ ಬಿಡುಗಡೆ ಮಾಡಿದ್ದಾರೆ.

ಈ ಕ್ಯಾಲೆಂಡರ್ ಜತೆ ಡಿಜಿಟಲ್ ಕ್ಯಾಲೆಂಡರ್ ಆ್ಯಪ್ ಕೂಡಾ ಬಿಡುಗಡೆ ಮಾಡಿದ್ದು, ಈ ಆ್ಯಪ್ ನ್ನು ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

ಸರ್ಕಾರದ ಯೋಜನೆಗಳ ಬಗ್ಗೆಯೇ ಕ್ಯಾಲೆಂಡರ್‍ ನಲ್ಲಿ ಹೈಲೈಟ್ ಮಾಡಲಾಗಿದೆ.

Comments are closed.