ರಾಷ್ಟ್ರೀಯ

ಡಿ.30ರ ನಂತರ ನೋಟು ನಿಷೇಧದ ಕುರಿತು ನಿತೀಶ್ ಅಂತಿಮ ನಿರ್ಧಾರ

Pinterest LinkedIn Tumblr

Nitish-Kumar
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500,1000 ರೂ ನೋಟುಗಳನ್ನು ನಿಷೇಧ ಮಾಡಿರುವ ಕ್ರಮಕ್ಕೆ ಆರಂಭದಿಂದಲೂ ಬೆಂಬಲ ವ್ಯಕ್ತಪಡಿಸುತ್ತಿರುವ ನಿತೀಶ್ ಕುಮಾರ್ ಬೆಂಬಲವನ್ನು ಮುಂದುವರೆಸುವ ಕುರಿತು ಡಿ.30 ರ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಜೆಡಿಯು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.
ನೋಟು ನಿಷೇಧದ ಕುರಿತು ಜೆಡಿಯು ಪಕ್ಷದ ನಾಯಕರು, ಕಾರ್ಯಕರ್ತರಿಂದ ಅಭಿಪ್ರಾಯ ಸಂಗಹಣೆ ಮಾಡಲಾಗುತ್ತಿದ್ದು, ಡಿ.30 ರ ನಂತರ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಬೆಂಬಲ ಮುಂದುವರೆಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಬಿಹಾರ ಜೆಡಿಯು ರಾಜ್ಯಾಧ್ಯಕ್ಷ ವಸಿಷ್ಠ ನಾರಾಯಣ್ ಸಿಂಗ್ ಹೇಳಿದ್ದಾರೆ.
ನೋಟು ನಿಷೇಧದ ನಿರ್ಧಾರದಿಂದ ಉಂಟಾಗಿರುವ ಸಮಸ್ಯೆಗಳನ್ನು 50 ದಿನಗಳಲ್ಲಿ ಪರಿಹರಿಸಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದ್ದರಿಂದ 50 ದಿನಗಳ ನಂತರ ನಿತೀಶ್ ಕುಮಾರ್ ನೋಟು ನಿಷೇಧದ ವಿಚಾರವಾಗಿ ತಮ್ಮ ಅಂತಿಮ ಅಭಿಪ್ರಾಯವನ್ನು ಪ್ರಕಟಿಸಲಿದ್ದಾರೆ ಎಂದು ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Comments are closed.