ರಾಷ್ಟ್ರೀಯ

ರತನ್ ಟಾಟಾ ವಿರುದ್ಧ ಸುಬ್ರಮಣಿಯನ್ ಸ್ವಾಮಿಯಿಂದ ಕ್ರಿಮಿನಲ್ ದೂರು ದಾಖಲು

Pinterest LinkedIn Tumblr

subramanian-swamyನವದೆಹಲಿ: 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಶುಕ್ರವಾರ ಉದ್ಯಮಿ ರತನ್ ಟಾಟಾ, ಮಾಜಿ ಟೆಲೆಕಾಂ ಸಚಿವ ಎ ರಾಜಾ, ನಿರಾ ರಾಡಿಯಾ ಹಾಗೂ ಇತರರ ವಿರುದ್ಧ ವಿಶೇಷ ಕೋರ್ಟ್ ನಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ಟಾಟಾ ಹಾಗೂ ಅವರ ಗ್ರೂಪ್ ನ ಕಂಪನಿಗಳು, ರಾಡಿಯಾ ಮತ್ತು ಇತರರನ್ನು ಸಿಬಿಐ ಉದ್ದೇಶಪೂರ್ವಕವಾಗಿಯೇ ಕ್ಲೀನ್ ಚಿಟ್ ನೀಡಿದೆ ಎಂದು ಆರೋಪಿಸಿ ಸುಬ್ರಮಣಿಯನ್ ಸ್ವಾಮಿ ಅವರು ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಅವರಿಗೆ ದೂರು ಸಲ್ಲಿಸಿದ್ದು, ಜನವರಿ 11ರಂದು ವಿಚಾರಣೆಗೆ ಬರಲಿದೆ.
ಯುನಿಟೆಕ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ ಹಾಗೂ ಅವರ ಕಂಪನಿಯ ಅಧಿಕಾರಿಗಳು ಮತ್ತು 2ಜಿ ಹಗರಣವನ್ನು ಗಂಭೀರವಾಗಿ ತನಿಖೆ ನಡೆಸದ ಸಿಬಿಐ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ವಾಮಿ ವಿಶೇಷ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಈ ಎಲ್ಲಾ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಸನ್ 409, 420, 463 ಮತ್ತು 120-ಬಿ ಅಡಿ ಪ್ರಾಸಿಕ್ಯೂಷನ್ ಜಾರಿ ಮಾಡಬೇಕು ಎಂದು ಸ್ವಾಮಿ ತಮ್ಮ ದೂರಿನಲ್ಲಿ ಕೋರಿದ್ದಾರೆ.

Comments are closed.