ರಾಷ್ಟ್ರೀಯ

ಈ ಆ್ಯಪ್ ಗಳಿಂದ ನಿಮ್ಮ ಬ್ಯಾಂಕ್ ಖಾತೆಯನ್ನು ಕದಿಯುವುದು ಸುಲಭ!

Pinterest LinkedIn Tumblr

computerನವದೆಹಲಿ(ಡಿ. 15): ಮೊಬೈಲ್ನಲ್ಲಿ ಕೆಲವು ಆ್ಯಪ್’ಗಳ ಮೂಲಕ ಹ್ಯಾಕರ್ಸ್’ಗಳು ನಿಮ್ಮ ಖಾತೆಯ ಮಾಹಿತಿಗಳನ್ನ ಕದಿಯಬಹುದು. ಇಂಥದ್ದೊಂದು ಎಚ್ಚರಿಕೆ ಸಂದೇಶ ರವಾನಿಸಿರೋದು ಕೇಂದ್ರ ಗೃಹ ಸಚಿವಾಲಯ. ಇಂಥ ನಾಲ್ಕು ಅಪಾಯಕಾರಿ ಆ್ಯಪ್’ಗಳನ್ನು ಸಚಿವಾಲಯವು ಪಟ್ಟಿ ಮಾಡಿದೆ. ಆ ನಾಲ್ಕು ಆ್ಯಪ್’ಗಳನ್ನ ನಿಮ್ಮ ಮೊಬೈಲ್ನಿಂದ ಈಗಲೇ ಡಿಲೀಟ್ ಮಾಡಿಬಿಡಿ.
ಯಾವುದು ಈ ಆ್ಯಪ್’ಗಳು?
1) vdjunkie – ವಿಡಿಯೋ ಆ್ಯಪ್
2) Talking Frog – ಎಂಟರ್ಟೈನ್ಮೆಂಟ್ ಆ್ಯಪ್
3) TOP GUN – ಗೇಮ್ ಆ್ಯಪ್
4) MPJUNKIE – ಸಂಗೀತದ ಆ್ಯಪ್
ಏನು ಅಪಾಯ ಮಾಡುತ್ತವೆ?
ಈ ಆ್ಯಪ್’ಗಳು ನಿಮ್ಮ ಸ್ಮಾರ್ಟ್’ಫೋನ್’ನಲ್ಲಿದ್ದರೆ, ಅವುಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆಯೂ ಸೇರಿದಂತೆ, ನಿಮ್ಮ ಖಾಸಗಿ ವಿಚಾರಗಳನ್ನು ಕದಿಯುವುದು ಹ್ಯಾಕರ್ಸ್’ಗಳಿಗೆ ಸುಲಭವಾಗಲಿದೆ. ಹೀಗೆ ಆ್ಯಪ್’ಗಳ ಮೂಲಕ ಮಾಹಿತಿ ಕದಿಯುತ್ತಿರುವ ಕುತಂತ್ರ ನಡೆಸುತ್ತಿರುವುದು ಪಾಕಿಸ್ತಾನದ ಐಎಸ್’ಐ. ಹೀಗಾಗಿ ಇವು ದೇಶದ ಭದ್ರತೆಗೂ ಒಳ್ಳೆಯದಲ್ಲ. ಈಗಲೇ ಈ ಆ್ಯಪ್’ಗಳನ್ನ ಡಿಲೀಟ್ ಮಾಡಿ ಎಂದು ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ ಕೊಟ್ಟಿದೆ.

Comments are closed.