ರಾಷ್ಟ್ರೀಯ

ಹಣ ಡ್ರಾ ಮಾಡಲು ವಿಫಲ: ಚಿಕಿತ್ಸೆ ಸಿಗದೆ ಕಾರ್ಮಿಕ ಸಾವು

Pinterest LinkedIn Tumblr

atmಅಲಿಗಡ: ಹಣವಿಲ್ಲದೇ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಕಾರ್ಮಿಕನೊಬ್ಬ ಮೃತ ಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಶಮೀಮ್ ಮತ ಕಾರ್ಮಿಕ, ಹಲವು ದಿನಗಳಿಂದ ಶಮೀಮ್ ಅನಾರೋಗ್ಯದಿಂದ ನರಳುತ್ತಿದ್ದ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಆತನಿಗೆ ಚಿಕಿತ್ಸೆಗಾಗಿ ಹಾಗೂ ಔಷಧಿಗಾಗಿ ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಸಾಧ್ಯವಾಗಲಿಲ್ಲ ಎಂದು ಆತನ ಪತ್ನಿ ರುಕ್ಸಾನಾ ತಿಳಿಸಿದ್ದಾಳೆ.
ನೋಟು ನಿಷೇಧದ ನಂತರ ಕಳೆದ ಕೆಲ ದಿನಗಳಿಂದ ಕೆಲಸ ವಿಲ್ಲದೇ ಮನೆಯಲ್ಲಿದ್ದ ಆತ ಕೆಲಸ ಮಾಡುತ್ತಿದ್ದ ಘಟಕಕ್ಕೆ ಬೀಗ ಜಡಿಯಲಾಗಿತ್ತು. ಈ ದಂಪತಿಗೆ 8 ವರ್ಷಗ ಮಗಳಿದ್ದಾಳೆ. ತನ್ನ ಪತಿಗೆ ಜ್ವರ ಬಂದಾಗಿನಿಂದ ಕೂಡಿಟ್ಟಿದ್ದ ಹಣದಿಂದ ಜೀವನ ನಡೆಸಿದೆವು, ನಿನ್ನೆ ಶಮೀಮ್ ಆರೋಗ್ಯದಲ್ಲಿ ತೀವ್ರ ಏರು ಪೇರಾಯಿತು. ಔಷಧಿ ತರಲು ಹಣಕ್ಕಾಗಿ ಎಟಿಎಂ ಗೆ ತೆರಳಿದ್ದೆ, ಆದರೆ ಅಲ್ಲಿ ಹಣ ಸಿಗಲಿಲ್ಲ. ಹೀಗಾಗಿ ನನ್ನ ಪತಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ ಎಂದು ಆಕೆ ನೊಂದು ನುಡಿದ್ದಾಳೆ. ಈ ಸಂಬಂಧ ಮೃತ ಕಾರ್ಮಿಕನ ಪತ್ನಿ ಮಾಡಿರುವ ಆರೋಪದ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸುವುದಾಗಿ ತಿಳಿಸಿದೆ.

Comments are closed.