ಮುಂಬೈ (ಡಿ.13): ನೋಟು ನಿಷೇಧ ಘೋಷಣೆಯಾದ ದಿನ ನ.08 ರಿಂದ ಡಿ.30 ವರೆಗೆ ಸಿಸಿಟಿವಿ ದಾಖಲೆಗಳನ್ನು ರಕ್ಷಿಸಿಡಿ ಎಂದು ಆರ್ ಬಿಐ ಬ್ಯಾಂಕುಗಳಿಗೆ ಸೂಚನೆ ನೀಡಿದೆ.
ಹೊಸ ನೋಟುಗಳಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಜಾರಿ ನಿರ್ದೇಶನಾಲಯ ಕಠಿಣ ಕ್ರಮ ಕೈಗೊಳ್ಳಲು ಸಿಸಿಟಿವಿ ದಾಖಲೆ ಅಗತ್ಯವೆಂದು ಆರ್ ಬಿಐ ಸ್ಪಷ್ಟನೆ ನೀಡಿದೆ. ನೋಟು ನಿಷೇಧಕ್ಕೂ ಮುನ್ನ ಅ.27 ರಂದು ಆರ್ ಬಿಐ, ಬ್ಯಾಂಕ್ ಹಾಲ್,
ಕೌಂಟರ್ ಎಲ್ಲಾ ಕಡೆ ಸಿಸಿಟಿವಿ ಅಳವಡಿಸಿ ಎಂದು ಬ್ಯಾಂಕ್ ಗಳಿಗೆ ಸುತ್ತೋಲೆ ಹೊರಡಿಸಿತ್ತು.
ದಿನದ ಕೊನೆಯಲ್ಲಿ ಬ್ರಾಂಚ್ ಮ್ಯಾನೇಜರ್ ಹಾಗೂ ಜಾಯಿಂಟ್ ಕಸ್ಟೋಡಿಯನ್ (ಜಂಟಿ ಉಸ್ತುವಾರಿ) ಸಿಸಿಟಿವಿ ರೆಕಾರ್ಡ್ ಗೆ ಸಹಿ ಹಾಕಬೇಕು ಎಂದು ಆರ್ ಬಿಐ ಹೇಳಿದೆ.
ರಾಷ್ಟ್ರೀಯ
Comments are closed.