ನವದೆಹಲಿ (ಡಿ.13): ಅತ್ಯಾಚಾರದಿಂದ ಹುಟ್ಟಿದ ಮಗು ಪರಿಹಾರಕ್ಕೆ ಅರ್ಹವಾಗಿದ್ದು ತಾಯಿ ಹಾಗೂ ಮಗು ಇಬ್ಬರಿಗೂ ಪರಿಹಾರವನ್ನು ನೀಡಬೇಕು ಎಂದು ದೆಹಲಿ ನ್ಯಾಯಾಲಯ ಆದೇಶಿಸಿದೆ.
ತಂದೆಯೊಬ್ಬ ಅಪ್ರಾಪ್ತ ತನ್ನ ಮಲಮಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.
ಅತ್ಯಾಚಾರಕ್ಕೆ ಒಳಪಟ್ಟ ಅಪ್ರಾಪ್ತೆ ಅಥವಾ ವಯಸ್ಕ ಹೆಣ್ಣುಮಗಳಿಗೆ ಮಗು ಹುಟ್ಟಿದರೆ ಆ ಮಗು ಪರಿಹಾರಕ್ಕೆ ಅರ್ಹವಾಗಿದ್ದು, ಮಗು ಹಾಗೂ ತಾಯಿ ಇಬ್ಬರಿಗೂ ಪರಿಹಾರವನ್ನು ನೀಡಬೇಕು ಎಂದು ನ್ಯಾ.ಗೀತಾ ಮಿತ್ತಲ್ ಮತ್ತು ಆರ್,ಕೆ ಗೌಬಾ ಪೀಠವು ಸ್ಪಷ್ಟವಾಗಿ ಹೇಳಿದೆ.