ರಾಷ್ಟ್ರೀಯ

ತಂದೆ ಸ್ನೇಹಿತರಿಂದ ಬಾಲಕಿಯ ಅತ್ಯಾಚಾರ

Pinterest LinkedIn Tumblr

minor-rape-genericಕಲಮಸೇರಿ: ತಂದೆಯ ಮೂವರು ಪಾನಮತ್ತ ಸ್ನೇಹಿತರಿಂದಲೇ ಕಳೆದ ಸೆಪ್ಟೆಂಬರ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಅಪ್ರಾಪ್ತ ಬಾಲಕಿ(14 ವ.) ಸೋಮವಾರ ಸಾವನ್ನಪ್ಪಿದ್ದಾಳೆ.

ಕಲಮಸೇರಿ ಠಾಣೆ ಪೊಲೀಸರು ರವಿ (49), ರಾಜು (36), ಹಾಗೂ ರಾಜೇಶ್ (31) ರನ್ನು ಬಂಧಿಸಿ ಅಪ್ರಾಪ್ತ ಬಾಲಕಿಯನ್ನು ಚಿಕಿತ್ಸೆಗಾಗಿ ಕೊಟ್ಟಾಯಂನ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು.

ಈ ಮಧ್ಯೆ ಅನಾರೋಗ್ಯದಿಂದ ಅಪ್ರಾಪ್ತ ಬಾಲಕಿ ತಂದೆ ಸಾವನ್ನಪ್ಪಿದ್ದು, ಆಕೆಯ ಯೋಗಕ್ಷೇಮವನ್ನು ಸ್ವಯಂ ಸೇವಾ ಸಂಸ್ಥೆ ನೋಡಿಕೊಳ್ಳುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ಆರೋಪಿಗಳ ವಿರುದ್ದ ಅತ್ಯಾಚಾರ ಪ್ರಕರಣದ ಜೊತೆಗೆ ಕೊಲೆ ಆರೋಪವನ್ನೂ ದಾಖಲಿಸಿಕೊಳ್ಳಲಾಗಿದೆ.

Comments are closed.