ಚೆನ್ನೈ: ‘ವಾರ್ಧಾ’ ಚಂಡಮಾರುತದ ಅಬ್ಬರಕ್ಕೆ ಚೆನ್ನೈ ಮಹಾನಗರ ತತ್ತರಿಸಿದೆ. ವಿದ್ಯುತ್ ಸಂಪರ್ಕವುವಿಲ್ಲದೆ ಜನ ಕತ್ತಲಲ್ಲೇ ರಾತ್ರಿ ಕಳೆದಿದ್ದಾರೆ.
ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದು, ಮಳೆಯಿಂದಾಗಿ ನಗರ ಹೊರವಲಯದ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ವಿಮಾನ ಸಂಚಾರ ಸ್ಥಗಿತವಾಗಿದೆ. ಕೆಲವು ಕಡೆ ನಗರ ಸಾರಿಗೆ, ಮೆಟ್ರೋ ಸಂಚಾರವಿದ್ದರೂ, ಪೂರ್ಣ ಪ್ರಮಾಣದಲ್ಲಿರಲಿಲ್ಲ. ಮರಗಳು ಉರುಳಿ ಬಿದ್ದು, ಚೆನ್ನೈನ 312 ರಸ್ತೆಗಳ ಸಂಚಾರವನ್ನು ಮುಚ್ಚಲಾಗಿದೆ.
ರಸ್ತೆಗಳಲ್ಲಿನ ಮರಗಳನ್ನು ತೆರವುಗೊಳಿಸಿದ್ದು, ಸಂಚಾರಕ್ಕೆ ಅನುವು ಮಾಡಲಾಗಿದೆ. ನಾಲ್ವರು, ವಿಲ್ಲುಪುರಂನಲ್ಲಿ ಒಬ್ಬರು ಸೇರಿದಂತೆ ವಿವಿಧೆಡೆ 13 ಮಂದಿ ಸಾವನ್ನಪ್ಪಿದ್ದು, 60 ಮಂದಿ ಗಾಯಗೊಂಡಿದ್ದಾರೆ. ಮೃತರ ಕುಟುಂಬದವರಿಗೆ ತಲಾ ನಾಲ್ಕು ಲಕ್ಷ ರೂ. ಪರಿಹಾರ ನೀಡಲು ತ.ನಾಡು ಸರ್ಕಾರ ಮುಂದಾಗಿದೆ. ತಮಿಳುನಾಡಿನಿಂದ ಆಂಧ್ರಕ್ಕೆ ವಾರ್ಧಾ ಚಂಡಮಾರುತ ಅಪ್ಪಳಿಸಿದ್ದು, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಸ್ಥಿತಿ ನಿಭಾಯಿಸಲು ಎನ್.ಡಿ.ಆರ್.ಎಫ್. ಸಿಬ್ಬಂದಿ ಸನ್ನದ್ಧವಾಗಿದ್ದಾರೆ.