ರಾಷ್ಟ್ರೀಯ

ನೋಟು ನಿಷೇಧ: ‘ಹಣಕಾಸಿನ ಪೋಖ್ರನ್’: ಆರ್.ಎಸ್.ಎಸ್ ಗುರುಮೂರ್ತಿ

Pinterest LinkedIn Tumblr

rss-logoದೆಹಲಿ: ನೋಟು ಅಮಾನ್ಯವು ಹಣಕಾಸಿನ ಪೋಖ್ರನ್ ಗೆ ಸಮನಾಗಿದೆ. ಇದರಿಂದ ರಿಯಲ್ ಏಸ್ಟೇಟ್ ವ್ಯವಹಾರ ಇಳಿಮುಖವಾಗಲಿದ್ದು, ಪಾರದರ್ಶಕತೆಯನ್ನು ಪ್ರೋತ್ಸಾಹಿಸದಂತಾಗುತ್ತದೆ ಎಂದು ಆರ್.ಎಸ್.ಎಸ್ ವಿಚಾರವಾದಿ ಗುರುಮೂರ್ತಿ ಹೇಳಿದರು.

ಜನರ ಬಳಿ ಹಣ ಇರುವಾಗ, ಅನಗತ್ಯವಾದುದನ್ನು ಖರೀದಿಸಲು ತೊಡಗುತ್ತಾರೆ. ಇದರಿಂದಾಗಿ, ಬೇಜವಾಬ್ದಾರಿತನ ಹೆಚ್ಚುತ್ತದೆ. ನೋಟು ಅಮಾನ್ಯದಿಂದ ಭಾರೀ ಬದಲಾವಣೆ ಮತ್ತು ದೇಶದಲ್ಲಿ ಪಾರದರ್ಶಕತೆ ಬಂದಿದೆ ಎಂದು ಅಭಿಪ್ರಾಯಪಟ್ಟರು. ಪೋಖ್ರನ್ ನಿಂದ ಊಹಾತೀತ ಬದಲಾವಣೆ ಸಾಧ್ಯವಾಯಿತು. ಇದರಿಂದ ಅಮೇರಿಕ ಭಾರತದತ್ತ ದೃಷ್ಟಿ ಹಾಯಿಸಿತು. ಅಣು ಬಾಂಬನ್ನು ಸ್ಫೋಟಿಸದಿದ್ದರೆ ನಿಮ್ಮತ್ತ ಯಾರೂ ಗಮನ ನೀಡುವುದಿಲ್ಲ ಎಂದು ಹೇಳಿದರು.

ಭಾರತ 1998 ರಲ್ಲಿ ಪೋಖ್ರನ್ ನಲ್ಲಿ ಪರಮಾಣು ಪರೀಕ್ಷೆ ನಡೆಸಿದ್ದರಿಂದ ಪರಮಾಣು ಶಕ್ತಿ ಉಳ್ಳವರ ಗುಂಪಿನಲ್ಲಿ ಸ್ಥಾನ ಪಡೆಯಲು ಸಾಧ್ಯವಾಯಿತು. ಕಪ್ಪು ಹಣವು ಮಾನಸಿಕ ಕಾಯಿಲೆಯಾಗಿದೆ. ಇದರ ಬದಲಾವಣೆ ಅಗತ್ಯ ಮತ್ತು ಭ್ರಷ್ಟ ಆದಾಯ ತೆರಿಗೆ ಇಲಾಖೆಯನ್ನು ಪಾರದರ್ಶಕವನ್ನಾಗಿಸಬೇಕಾಗಿದೆ.

ಸಾಮಾನ್ಯ ಅರ್ಥವ್ಯವಸ್ಥೆಗೆ ಅಗತ್ಯವಾಗುವ ಹಣಕ್ಕಿಂತ ಹೆಚ್ಚು ಹಣ ಕಳೆದ ಯು.ಪಿ.ಎ ಸರಕಾರದ ಅವಧಿಯಲ್ಲಿ ಚಲಾವಣೆ ಆಗುತ್ತಿತ್ತು ಎಂದು ಗುರುಮೂರ್ತಿ ಹೇಳಿದರು. ಶೇರು, ಚಿನ್ನ ಹಾಗೂ ರಿಯಲ್ ದಂಧೆ ಮೇಲೆ ಹೂಡಿರುವ ಕಪ್ಪು ಹಣವನ್ನು ಹೊರಗೆಳೆಯಬೇಕು ಎಂದು ಆಗ್ರಹಿಸಿದರು.

ಮಾಜಿ ಆರ್.ಬಿ.ಐ ಗವರ್ನರ್ ರಘುರಾಂ ರಾಜನ್ ಕುರಿತು ಗುರುಮೂರ್ತಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Comments are closed.