ರಾಷ್ಟ್ರೀಯ

ನೋಟು ನಿಷೇಧ: ನವೆಂಬರಿನಲ್ಲಿ ಶೇ.23 ಉದ್ಯೋಗ ಇಳಿಕೆ

Pinterest LinkedIn Tumblr

jobದೆಹಲಿ: ಮೋದಿ ಸರಕಾರದ ನೋಟು ಅಮಾನ್ಯ ಘೋಷಣೆ ನಂತರ ಹಲವು ಉದ್ಯೋಗ ಸಂಬಂಧಿ ಯೋಜನೆಗಳಲ್ಲಿ ಕುಸಿತ ಕಂಡಿದೆ. ಕಳೆದ ನವೆಂಬರ್ ತಿಂಗಳಲ್ಲಿ ಕೆಲಸ ಅರಸಿ ತೆರಳಿದವರಿಗೆ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಶೇ.23 ಕುಸಿರ ಕಂಡಿದೆ. ಹಲವು ಖಾಲಿ ಕೈಯಲ್ಲಿ ತಮ್ಮ ಊರಿಗೆ ಮರಳಿದ್ದಾರೆ.

ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆ ಯಡಿಯಲ್ಲಿ ಕೆಲಸ ಸಿಕ್ಕರೆ ಉತ್ತಮ. ಈಗ ನಾವು ದಿನಕ್ಕೆ 50 ರು. ಕೂಲಿಯಂತೆ ಕೆಲಸ ಮಾಡುತ್ತಿದ್ದೇವೆ. ಇದನ್ನು ಬಿಟ್ಟರೆ ಕಾಲ ದೂಡುವುದೇ ಕೆಲಸ ಎಂದು ಜಾರ್ಖಂಡಿನ ಸಿಂಗ್ ಭುಂ ಜಿಲ್ಲೆಯ 20 ಹರೆಯದ ಮಹಿಳೆ ಅಸಹಾಯಕಳಾಗಿ ಹೇಳಿದರು.

ನಗದಿನ ಅಲಭ್ಯತೆಯಿಂದ ಗ್ರಾಮೀಣ ಭಾಗದಲ್ಲ ದಿನಗೂಲಿ ತತ್ವಾರ ಬಂದಿದೆ. ದೇಶಾದ್ಯಂತ ಈ ಸಮಸ್ಯೆ ಇದೆ. ಆದರೂ, ಕೃಷಿ ಕೆಲಸಗಾರರು ದಿನದ ಖರ್ಚು ನಿಭಾಯಿಸಲು ಬೇಕಾಗುವಷ್ಟು ದಿನಗೂಲಿ ಪಡೆಯುವಲ್ಲಿ ಶಕ್ತರಾಗಿದ್ದಾರೆ ಎಂದು ಮಹಿಳೆ ತಿಳಿಸಿದಳು.

ಉದ್ಯೋಗ ಖಚಿತ ಯೋಜನೆಯಡಿ ಸಿಗುವ ಕೆಲಸದಿಂದ ಸಿಕ್ಕ ದಿನಗೂಲಿಯನ್ನು ಬ್ಯಾಂಕು ಮತ್ತು ಅಂಚೆ ಕಚೇರಿಯಲ್ಲಿ ಠೇವಣಿ ಇಡಲಾಗುತ್ತಿದೆ.

Comments are closed.