ರಾಷ್ಟ್ರೀಯ

ನೋಟು ನಿಷೇಧ ಬಡವರ ವಿರುದ್ಧದ ಸಮರ: ರಾಹುಲ್ ಕಿಡಿ

Pinterest LinkedIn Tumblr

rahul-modi-759ದಾದ್ರಿ: ನೋಟು ನಿಷೇಧ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಬಡವರ ವಿರುದ್ಧ ಯುದ್ಧ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಮೋದಿ ವಿರುದ್ಧ ಗುಡುಗಿದ್ದಾರೆ.
ಉತ್ತರಪ್ರದೇಶದ ದಾದ್ರಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನವೆಂಬರ್ 8ರಂದು ನೋಟು ನಿಷೇಧವನ್ನು ಪ್ರಧಾನಿ ಮೋದಿ ಅವರು ಘೋಷಿಸಿ ಬಡವರ ವಿರುದ್ಧ ಯುದ್ಧ ಮಾಡುತ್ತಿದ್ದಾರೆ. ಮೋದಿ ಅವರ ನಗದು ರಹಿತ ಆರ್ಥಿಕತೆಯಿಂದ ಬಡವರು ಹಣವಿಲ್ಲದಂತಾಗಿದ್ದಾರೆ. ಬಡವರು ಶ್ರಮಪಟ್ಟು ಗಳಿಸಿದ ಹಣವನ್ನು ಮೋದಿ ಅವರು ದರೋಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಳಧನಿಕರ ಹಣವನ್ನು ಹೊರತೆಗೆಯುವುದಾಗಿ ಹೇಳಿ ಮೋದಿ ಅವರು ಬಡವರ ವಿರುದ್ಧದ ಸಮರ ಸಾರಿದ್ದಾರೆ. ನೋಟು ನಿಷೇಧದಿಂದ ನಿಷ್ಠಾವಂತ ಜನರನ್ನು ಮೋದಿ ಬೀದಿಗೆ ತಂದಿದ್ದಾರೆ. ಆದರೆ ಶ್ರೀಮಂತರು ಹಾಗ ಭ್ರಷ್ಠರು ಬ್ಯಾಂಕುಗಳ ಹಿಂಬಾಗಿಲಿನಿಂದ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Comments are closed.