ರಾಷ್ಟ್ರೀಯ

ಡಿ.10ಕ್ಕೆ 12.44 ಲಕ್ಷ ಕೋಟಿ ರೂ. ಹಳೇ ನೋಟು ಜಮಾ: ಆರ್‌ಬಿಐ

Pinterest LinkedIn Tumblr

noteನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧದ ಬಳಿಕ 12.44 ಲಕ್ಷ ಕೋಟಿ ಹಳೇ ನೋಟುಗಳು ಬ್ಯಾಂಕುಗಳಲ್ಲಿ ಜಮೆಯಾಗಿದೆ ಎಂದು ರಾಷ್ಟ್ರೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಹೇಳಿದೆ.
ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500-1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿದ್ದು ಅಲ್ಲಿಂದ ಡಿಸೆಂಬರ್ 10ರವರೆಗೂ 12.44 ಲಕ್ಷ ಕೋಟಿ ಹಳೇ ನೋಟುಗಳು ಬ್ಯಾಂಕ್ ಗಳಲ್ಲಿ ಜಮೆಯಾಗಿದೆ ಎಂದು ಆರ್‌ಬಿಐನ ಉಪ ಗವರ್ನರ್ ಆರ್. ಗಾಂಧೀ ಹೇಳಿದ್ದಾರೆ.
ಆರ್ಬಿಐ ಮೂಲಗಳ ಪ್ರಕಾರ, ನವೆಂಬರ್ 8ರ ನೋಟು ನಿಷೇಧದ ಬಳಿಕ ಬ್ಯಾಂಕ್ ಹಾಗೂ ಎಟಿಎಂ ಮೂಲಕ 4.61 ಲಕ್ಷ ಕೋಟಿ ರುಪಾಯಿನ್ನು ಜನರಿಗೆ ತಲುಪಿಸಲಾಗಿದೆಯಂತೆ.
ನೋಟು ನಿಷೇಧದ ಬಳಿಕ ದೇಶಾದ್ಯಂತ 21.8 ಬಿಲಿಯನ್ ನೋಟುಗಳನ್ನು ನೀಡಲಾಗಿದೆ ಎಂದು ಗಾಂಧಿ ಅವರು ತಿಳಿಸಿದ್ದಾರೆ.

Comments are closed.