ರಾಷ್ಟ್ರೀಯ

ಕಪ್ಪುಹಣವನ್ನು ಬಿಳಿಯಾಗಿಸಲು ಕಾಳಧನಿಕರಿಗೆ ನೆರವಾಗುತ್ತಿದ್ದ 7 ಮಂದಿ ದಲ್ಲಾಳಿಗಳ ಬಂಧನ; 93 ಲಕ್ಷ ನಗದು ಜಪ್ತಿ

Pinterest LinkedIn Tumblr

note1

ಬೆಂಗಳೂರು: ಪ್ರಮುಖ ಬೆಳವಣಿಗೆಯೊಂದರಲ್ಲಿ ಕಪ್ಪುಹಣವನ್ನು ಬಿಳಿಯಾಗಿಸಲು ಕಾಳಧನಿಕರಿಗೆ ನೆರವಾಗುತ್ತಿದ್ದ 7 ಮಂದಿ ದಲ್ಲಾಳಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ನಿನ್ನೆ ತಡರಾತ್ರಿ ಬೆಂಗಳೂರಿನ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕರ್ನಾಟಕ ಸರಕಾರದ ಓರ್ವ ಹಿರಿಯ ಅಧಿಕಾರಿ ಸಂಬಂಧಿಯೂ ಸೇರಿದಂತೆ ಈ ಏಳು ಮಂದಿ ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ. ಅಂತೆಯೇ ಬಂಧಿತರಿಂದ 93 ಲಕ್ಷ ರು. ಹೊಸ ನೋಟುಗಳನ್ನು ವಶಪಡಿಸಿಕೊಂಡಿದೆ. ಇತ್ತೀಚೆಗೆ ಸ್ನಾನದ ಮನೆಯಲ್ಲಿ ಅಪಾರ ಪ್ರಮಾಣದ ಹಣ ಬಿಚ್ಚಿಟ್ಟಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ಅದರ ಮುಂದುವರೆದ ಭಾಗ ಎಂಬಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಒಟ್ಟು ಏಳು ಮಂದಿ ದಲ್ಲಾಳಿಗಳನ್ನು ಬಂಧಿಸಿದ್ದಾರೆ. ಅಂತೆಯೇ ಬಂಧಿತರಿಂದ ಒಟ್ಟು 93 ಲಕ್ಷ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಹಣ ಬದಲಿಸಿಕೊಳ್ಳುವ ನೆಪದಲ್ಲಿ ಮಧ್ಯವರ್ತಿಗಳನ್ನು ಸಂರ್ಪಸಿದ ಅಧಿಕಾರಿಗಳು ನಂತರ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರ ಪೈಕಿ ಸರ್ಕಾರಿ ಅಧಿಕಾರಿಯ ಸಂಬಂಧಿ ಸಹ ಸೇರಿದ್ದು, ಈ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಮಧ್ಯವರ್ತಿಗಳು ಶೇ.15 ರಿಂದ ಶೇ.35 ರಷ್ಟು ಕಮಿಷನ್ ಪಡೆದು ಹಣ ಬದಲಾಯಿಸಿ ಕೊಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.