ರಾಷ್ಟ್ರೀಯ

ದಿಲ್ಲಿಯಲ್ಲಿ ವಕೀಲನ ಬಳಿ ಸಿಕ್ಕಿತು ಬರೋಬರಿ 13 ಕೋಟಿ ರೂ.

Pinterest LinkedIn Tumblr

tandon-cash

ನವದೆಹಲಿ: ಅಕ್ರಮ ಹಣದ ಬೇಟೆ ಮುಂದು ವರೆದಿದ್ದು, ದಿಲ್ಲಿಯಲ್ಲಿ ಭಾನುವಾರ 13.5 ಕೋಟಿ ರೂ. ಹಣವನ್ನು ಅಪರಾಧ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪೈಕಿ 2.6 ಕೋಟಿ ರೂ. ಮೊತ್ತವು ಹೊಸ ನೋಟುಗಳಲ್ಲಿದೆ.

ಟಿ ಆ್ಯಂಡ್‌ ಟಿ ಎಂಬ ಕಾನೂನು ಸೇವಾ ಕಂಪನಿಯ ಮೇಲೆ ದಾಳಿ ನಡೆದಿದ್ದು, ಈ ಕಂಪನಿ ರೋಹಿತ್‌ ಟಂಡನ್‌ ಎಂಬ ಕೋಟ್ಯಧೀಶ ವಕೀಲನಿಗೆ ಸೇರಿದೆ.

ಇದರಲ್ಲಿ ರದ್ದಾದ 1000 ರೂ. ನೋಟುಗಳ ಮೌಲ್ಯ 7 ಕೋಟಿ ರೂ. ಆಗಿದೆ. 100 ರೂ. ನೋಟಿನ 3 ಕೋಟಿ ರೂ. ಮೊತ್ತವಿದೆ. ಅಂತೆಯೇ 2000 ರೂ. ನೋಟಿನ ರೂಪದಲ್ಲಿ 2.61 ಕೋಟಿ ರೂ. ಇದ್ದರೆ ಮಿಕ್ಕ ಮೊತ್ತ ಹೊಸ 500 ರೂ. ಹಾಗೂ 50 ರೂ. ನೋಟಿನ ರೂಪದಲ್ಲಿದೆ. ಮನೆಯಲ್ಲಿ 2 ನೋಟು ಎಣಿಸುವ ಯಂತ್ರಗಳೂ ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಇದೇ ಟಂಡನ್‌ ಇತ್ತೀಚೆಗೆ ಐಟಿ ದಾಳಿ ವೇಳೆ 125 ಕೋಟಿ ರೂ. ದಾಖಲೆರಹಿತ ಆದಾಯ ತನ್ನಲ್ಲಿದೆ ಎಂದು ಘೋಷಿಸಿಕೊಂಡಿದ್ದ ಎಂದು ಆದಾಯ ತೆರಿಗೆ ಮೂಲಗಳು ಹೇಳಿವೆ. ದಾಳಿಯ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ರೋಹಿತ್‌ ಮನೆಗೆ ಶನಿವಾರ ಸಂಜೆ ಭಾರೀ ಪ್ರಮಾಣದಲ್ಲಿ ನಗದು ಬಂದಿದೆ ಎಂಬ ಮಾಹಿತಿಯನ್ನು ಆಧರಿಸಿ, ಶನಿವಾರ ರಾತ್ರಿ ಮನೆ ಮೇಲೆ ದಾಳಿ ನಡೆಸಲಾಗಿತ್ತು.

Comments are closed.