ರಾಷ್ಟ್ರೀಯ

ಜನ್ ಧನ್ ಖಾತೆಗಳಲ್ಲಿ ಶೇ.23ರಷ್ಟು ಶೂನ್ಯ ಬ್ಯಾಲೆನ್ಸ್

Pinterest LinkedIn Tumblr

jana-danನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಜನ್ ಧನ್ ಖಾತೆಯಲ್ಲಿ ಸಾವಿರಾರು ಕೋಟಿ ರುಪಾಯಿ ಜಮೆಯಾಗುತ್ತಿದೆಎಂಬ ಸುದ್ದಿಯ ಬೆನ್ನಲ್ಲೇ ಐದನೇ ಒಂದರಷ್ಟು ಜನ್ ಧನ್ ಖಾತೆಗಳು ಇನ್ನೂ ಶೂನ್ಯ ಬ್ಯಾಲೆನ್ಸ್ ಹೊಂದಿರುವುದು ಬೆಳಕಿಗೆ ಬಂದಿದೆ.
ಒಟ್ಟು 25.8 ಕೋಟಿ ಜನ್ ಧನ್ ಖಾತೆಗಳಲ್ಲಿ ಕೇವಲ 288 ಕೋಟಿ ರುಪಾಯಿ ಇತ್ತು. ಆದರೆ ಅದು ಡಿಸೆಂಬರ್ 7ರವರೆಗೆ 74,610 ಕೋಟಿ ರುಪಾಯಿಗೆ ಏರಿಕೆಯಾಗಿದೆ.
ನವೆಂಬರ್ 8ರಂದು ನೋಟ್ ನಿಷೇಧಿಸಿದ ಮಾರನೇ ದಿನವೇ ಜನ್ ಧನ್ ಖಾತೆಗೆ ಬರೊಬ್ಬರಿ 29,000 ಕೋಟಿ ರುಪಾಯಿ ಹರಿದು ಬಂದಿತ್ತು. ಇದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶಾದ್ಯಂತ ಎಲ್ಲರಿಗೂ ಎಚ್ಚರಿ ಮೂಡಿಸಿತ್ತು. ಆದರೆ ಹಣಕಾಸು ಸಚಿವಾಲಯದ ದಾಖಲೆಗಳ ಪ್ರಕಾರ, ಶೇ.22.9ರಷ್ಟು ಖಾತೆಗಳು ಯಾವುದೇ ಬ್ಯಾಲೆನ್ಸ್ ಅನ್ನು ಹೊಂದಿಲ್ಲ.
ಜನ್ ಧನ್ ಖಾತೆಗೆ 50 ಸಾವಿರ ರುಪಾಯಿವರೆಗೆ ಮಾತ್ರ ಜಮೆ ಮಾಡಲು ಅವಕಾಶ ನೀಡಿದ್ದ ಆರ್ ಬಿಐ, ಖಾತೆಯಿಂದ ಹಣ ಪಡೆಯುವ ಮಿತಿಯನ್ನು ಹತ್ತು ಸಾವಿರ ರು. ಕಡಿತಗೊಳಿಸಿದೆ.
ನೋಟು ಅಮಾನ್ಯದ ಬಳಿಕ ‘ಜನ್ ಧನ್’ ಖಾತೆಗಳಲ್ಲಿ ಹಣದ ಹೊಳೆ ಹರಿದು ಬರುತ್ತಿದ್ದು, ಹೆಚ್ಚಿನವು ಹಣ ಕಪ್ಪುಹಣ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ, ಆರ್ ಬಿಐ ಜನ್ ಧನ್ ಖಾತೆಗಳ ಮೇಲೆ ಕಡಿವಾಣ ಹಾಕಿದೆ.

Comments are closed.