ರಾಷ್ಟ್ರೀಯ

ಪುತ್ರನ ಬಂಧನ: ಆಘಾತದಿಂದ ಆರ್ ಎಸ್ಎಸ್ ನಾಯಕ ಸಾವು

Pinterest LinkedIn Tumblr

die-11ಮುಜಾಫರ್ ನಗರ: ಖತೋಲಿ ನಗರದಲ್ಲಿ ಆರ್ ಎಸ್ಎಸ್ ನಾಯಕರೊಬ್ಬರು ತಮ್ಮ ಪುತ್ರ ಕಳತನ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾದ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಅಜಯ್ ಕುಮಾರ್ ನೇತೃತ್ವದ ತಂಡ ನಿನ್ನೆ ಕಳ್ಳತನ ಆರೋಪದ ಮೇಲೆ ಅಭೆಯ್ ಕಂದ್ ಶರ್ಮಾ ಎಂಬುವವರನ್ನು ಬಂಧಿಸಿತ್ತು. ಬಂಧನ ಸುದ್ದಿ ಕೇಳಿದ ಅವರ ತಂದೆ ಚೇತನ್ ಪ್ರಕಾಶ್ ಅವರು ಆಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಠಾಣಾ ಅಧಿಕಾರಿ ಕೆ.ಪಿ.ಸಿಂಗ್ ಅವರು ಹೇಳಿದ್ದಾರೆ.
ಈ ಮಧ್ಯೆ, ಆರೋಪಿ ತಂದೆ ಚೇತನ್ ಪ್ರಕಾಶ್ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಸನ್ ಇನ್ಸ್ ಪೆಕ್ಟರ್ ಅಜಯ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.
ಇನ್ನು ಘಟನೆಯನ್ನು ಖಂಡಿಸಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಧರಣಿ ನಡೆಸಿದ ಘಟನೆಯೂ ನಡೆದಿದೆ.

Comments are closed.