ರಾಷ್ಟ್ರೀಯ

ರಾಷ್ಟ್ರಪತಿ ಪ್ರಣಬ್​ಗೆ 81

Pinterest LinkedIn Tumblr

pranavನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾನುವಾರ 81ನೇ ವಸಂತಕ್ಕೆ ಕಾಲಿರಿಸಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖರ್ಜಿ ಅವರನ್ನು ಅಭಿನಂದಿಸಿದರು.

‘ಪ್ರಣಬ್ ಮುಖರ್ಜಿ ಅವರ ವಿವೇಕದಿಂದ ರಾಷ್ಟ್ರಕ್ಕೆ ಅತ್ಯಂತ ಅನುಕೂಲವಾಗಿದೆ. ಇಂತಹ ರಾಷ್ಟ್ರಪತಿಯನ್ನು ಹೊಂದಿರುವುದಕ್ಕಾಗಿ ರಾಷ್ಟ್ರ ಹೆಮ್ಮೆ ಪಡುತ್ತದೆ’ ಎಂದು ಮೋದಿ ಶ್ಲಾಘಿಸಿದ್ದಾರೆ.

‘ರಾಷ್ಟ್ರಪತಿ ಅವರಿಗೆ ಜನ್ಮ ದಿನದ ಶುಭಾಶಯಗಳು. ಅವರ ಅಮೋಘ ಅನುಭವ ಮತ್ತು ವಿವೇಕದಿಂದ ರಾಷ್ಟ್ರಕ್ಕೆ ದೊಡ್ಡ ಪ್ರಮಾಣದ ಲಾಭವಾಗಿದೆ. ಅವರಿಗೆ ಸುದೀರ್ಘವಾದ ಆರೋಗ್ಯಯುತ ಬದುಕು ಲಭಿಸಲಿ ಎಂದು ನಾನು ಪ್ರಾರ್ಥಿಸುವೆ’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಜನ್ಮ ದಿನದ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೂ ರಾಷ್ಟ್ರಪತಿಯವರನ್ನು ಅಭಿನಂದಿಸಿದ್ದಾರೆ.

Comments are closed.