ರಾಷ್ಟ್ರೀಯ

ಕಳವು ಆರೋಪದಡಿ ರುಯಿಯಾ ಸಮೂಹ ಅಧ್ಯಕ್ಷ ಸಿಐಡಿ ವಶ

Pinterest LinkedIn Tumblr

ruyiಕೋಲ್ಕತ: ಕಳವು ಆರೋಪ ಪ್ರಕರಣದಲ್ಲಿ ಬಂಧಿತರಾದ ರುಯಿಯಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪವನ್ ರುಯಿಯಾ ಅವರನ್ನು ನ್ಯಾಯಾಲಯವು ಭಾನುವಾರ 14 ದಿನಗಳ ಅವಧಿಗೆ ಸಿಐಡಿ ವಶಕ್ಕೆ ಒಪ್ಪಿಸಿತು.

ರುಯಿಯಾ ಅವರನ್ನು ರೈಲ್ವೆ ಇಲಾಖೆ ನೀಡಿದ್ದ ಕಳವು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಐಡಿ ಇಲಾಖೆ ನವದೆಹಲಿಯ ಸುಂದರ ನಗರ ಪ್ರದೇಶದಲ್ಲಿನ ನಿವಾಸದಲ್ಲಿ ಶನಿವಾರ ಬೆಳಗ್ಗೆ ಬಂಧಿಸಿತ್ತು.

ಕೋಲ್ಕತ ನಗರದ ಡಂ ಡಂನ ಜೆಸ್ಸೋಪ್ ಕಾರ್ಖಾನೆ ಆವರಣದಲ್ಲಿ ಇದ್ದ 50 ಕೋಟಿ ರೂಪಾಯಿ ಮೌಲದ್ಯದ ವಸ್ತುಗಳ ನಾಪತ್ತೆಯಾದ ಸಂಬಂಧ ರೈಲ್ವೆ ಸಚಿವಾಲಯವು ತಿಂಗಳ ಹಿಂದೆ ರೈಲ್ವೆ ಇಲಾಖೆಗೆ ದೂರು ನೀಡಿತ್ತು. ಈ ದೂರಿನ ಆಧಾರದಲ್ಲಿ ರುಯಿಯಾ ಅವರನ್ನು ಬಂಧಿಸಿದ ಸಿಐಡಿ, ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯಡಿಯಲ್ಲಿ ವಂಚನೆ, ಕ್ರಿಮಿನಲ್ ವಿಶ್ವಾಸದ್ರೋಹ ಪ್ರಕರಣಗಳನ್ನು ದಾಖಲಿಸಿತ್ತು.

Comments are closed.