ರಾಷ್ಟ್ರೀಯ

ಕಾರ್ಡ್ ಮತ್ತು ಆನ್’ಲೈನ್ ಮೂಲಕ ಹಣ ಪಾವತಿ ಮಾಡುವವರಿಗೆ ಡ್ರಾ ಮೂಲಕ ಬಹುಮಾನ

Pinterest LinkedIn Tumblr

swipe
ನವದೆಹಲಿ(ಡಿ. 11): ದೇಶದಲ್ಲಿ ಕ್ಯಾಷ್’ಲೆಸ್ ವಹಿವಾಟು ಸಂಸ್ಕೃತಿಯನ್ನು ಪಸರಿಸಲು ನೀತಿ ಆಯೋಗ ಹೊಸ ತಂತ್ರ ಹೂಡಿದೆ. ಕಾರ್ಡ್ ಮತ್ತು ಆನ್’ಲೈನ್ ಮೂಲಕ ಹಣ ಪಾವತಿ ಮಾಡುವವರಿಗೆ ಡ್ರಾ ಮೂಲಕ ಬಹುಮಾನ ನೀಡುವ ಚಿಂತನೆ ನಡೆದಿದೆ. ಗ್ರಾಮೀಣ ಭಾಗದ ಜನರು ಹಾಗೂ ಸಣ್ಣ ಪಟ್ಟಣಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗುತ್ತಿದೆ.
ಕೇಂದ್ರದ ಮೂಲಗಳ ಪ್ರಕಾರ, ಈ ಬಹುಮಾನಗಳಿಗೆಂದೇ ರಾಷ್ಟ್ರೀಯ ಹಣಕಾಸು ಸೇರ್ಪಡೆ ನಿಧಿ(ನ್ಯಾಷನಲ್ ಫೈನಾನ್ಷಿಯಲ್ ಇನ್’ಕ್ಲೂಷನ್ ಫಂಡ್)ಗೆ 125 ಕೋಟಿ ರೂಗಳನ್ನು ಎತ್ತಿಡಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ(ಎನ್’ಪಿಸಿಐ) ಸಂಸ್ಥೆಗೆ ಯೋಜನೆ ರೂಪಿಸುವ ಜವಾಬ್ದಾರಿ ನೀಡಲಾಗುತ್ತಿದೆ. ಯಾವ ರೀತಿಯಲ್ಲಿ ಬಹುಮಾನ ನೀಡಬೇಕೆಂಬುದನ್ನು ಎನ್’ಪಿಸಿಐ ನಿರ್ಧರಿಸಲಿದೆ.
ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಮೂರು ತಿಂಗಳಿಗೊಮ್ಮೆ 1 ಕೋಟಿ ರೂಪಾಯಿ ಬಂಪರ್ ಬಹುಮಾನ ನೀಡಲಾಗುತ್ತದೆ. ಜೊತೆಗೆ, ಪ್ರತೀ ವಾರ 20 ಮಂದಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ನೀಡುವ ಚಿಂತನೆ ಇದೆ. ಈ 20 ಮಂದಿಯಲ್ಲಿ 10 ಮಂದಿಯು ಗ್ರಾಹಕರಾದರೆ, ಇನ್ನುಳಿದ 10 ಜನರು ವ್ಯಾಪಾರಸ್ಥರಾಗಿರುತ್ತಾರೆನ್ನಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಈ ಯೋಜನೆ ಘೋಷಣೆಯಾಗುವ ಸಾಧ್ಯತೆ ಇದೆ.

Comments are closed.