ರಾಷ್ಟ್ರೀಯ

500 ರೂ. ಹಳೆ ನೋಟಿನಿಂದ ವಿದ್ಯುತ್ ತಯಾರಿಸಿದ!

Pinterest LinkedIn Tumblr

500ಒಡಿಶಾ(ಡಿ.11): 500 ಹಾಗೂ 1000 ರೂ. ನೋಟು ಬ್ಯಾನ್ ವಿಚಾರ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಈ ಬಾರಿಯ ಅಧಿವೇಶನವೂ ನೋಟ್ ಬ್ಯಾನ್ ಬಿಸಿಗೆ ಬಲಿಯಾಗುತ್ತಿದೆ. ಆದರೆ ಇವೆಲ್ಲದರ ನಡುವೆ ಯುವಕನೊಬ್ಬ 500 ರೂ. ಹಳೆ ನೋಟಿನಿಂದ ವಿದ್ಯುತ್ ಉತ್ಪಾದಿಸಿ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾನೆ,
ಈ ಕುರಿತಾಗಿ ಮಾತನಾಡಿರುವ ಯುವಕ ‘ಬಿಸಿಲು ಇಲ್ಲವೇ ಬೆಳಕಿನ ಸಂಪರ್ಕಕ್ಕೆ ಬರುತ್ತಿದ್ದಂತೆ, ಇದರಿಇಂದ ಸಿಲಿಕಾನ್ ವಿದ್ಯುತ್ ಉತ್ಪಾದಿಸಬಹುದು. ಕೇವಲ ಸಿಲಿಕಾನ್ ಪ್ಲೇಟ್’ನ್ನು ನೋಟ್’ನ ಒಂದು ಬದಿಗೆ ಅಳವಡಿಸಬೇಕಾಗುತ್ತದೆ.’ ಎಂದಿದ್ದಾನೆ.
‘ಸಿಲಿಕಾನ್ ಪ್ಲೇಟ್ ಅಳವಡಿಸಿದ ನೋಟನ್ನು ಬಿಸಿಲಿನ ಸಂಪರ್ಕಕ್ಕೆ ತರುತ್ತಿದ್ದಂತೆಯೇ ಇದರಿಂದ ಸುಮಾರು 5 ವೋಲ್ಟ್’ನಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ. ಒಂದು ವೇಳೆ ಇದನ್ನು ವಿದ್ಯುತ್ ತಂತಿಯೊಂದಿಗೆ ಟ್ರಾನ್ಸ್’ಫರ್ಮರ್’ಗೆ ಜೋಡಿಸಿದರೆ 220 ವೋಲ್ಟ್’ನಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ. ಇದರಿಂದ ಒಂದು ಬಲ್ಬ್ ಇಲ್ಲವೇ ಫ್ಯಾನ್’ನ್ನು ತಿರುಗುತ್ತದೆ. ಈ ವಿದ್ಯುತ್’ನ್ನು ಬ್ಯಾಟರಿ ರೂಪದಲ್ಲಿ ಸ್ಟೋರ್ ಮಾಡಿದರೆ ದಿನದ 24 ಗಂಟೆಯೂ ಬಳಸಬಹುದು’ ಎನ್ನುವುದು ಯುವಕನ ಮಾತಾಗಿದೆ.
500 ರೂಪಾಯಿ ನೋಡಿನಲ್ಲಿರುವ ಸಿಲಿಕಾನ್ ಉಪಯೋಗಿಸಿ ವಿದ್ಯುತ್ ತಯಾರಿಸಿದ ಆ ಲಕ್ಷ್ಮಣ್ ದುಂಡಿ, ಸದ್ಯ ಒಡಿಶಾದ ನುವಾಪಾಡಾ ಖಾರಿಯರ್ ಕಾಲೇಜ್’ನಲ್ಲಿ ಇಂಟರ್’ಮೀಡಿಯೆಟ್ ಸೈನ್ಸ್’ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ತನ್ನ ಈ ವಿನೂತನ ಅನ್ವೇಷಣೆಯನ್ನು ಯಶಸ್ವಿಗೊಳಿಸಲು ಈತ ಸರ್ಕಾರದ ಪ್ರೋತ್ಸಾಹ ಬಯಸುತ್ತಿದ್ದಾನೆ. ಕೂಲಿ ಕಾರ್ಮಿಕರ ಮಗನಾಗಿರುವ ಈತನೂ ಕಾಲೇಜು ಮುಗಿಸಿ ಕೆಲಸ ಮಾಡುತ್ತಾನೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ವಿಜ್ಞಾನ ಉಪನ್ಯಾಸಕರೊಬ್ಬರು ‘ಒಂದು ವೇಳೆ 500 ರೂ ನೋಟಿನಲ್ಲಿ ನಿಜಕ್ಕೂ ಸಿಲಿಕಾನ್ ಇದ್ದರೆ ಇದನ್ನು ಸೋಲಾರ್ ಬ್ಯಾಟರಿಯಾಗಿ ಬಳಸಬಹುದು ಹಾಗೂ ವುದ್ಯುತ್ ಉತ್ಪಾದಿಸಬಹುದು’ ಎಂದಿದ್ದಾರೆ.

Comments are closed.