ರಾಷ್ಟ್ರೀಯ

ಅಟಲ್- ಅಡ್ವಾಣಿ ಪ್ರಯತ್ನದ ಫಲವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂಜಾಯ್ ಮಾಡುತ್ತಿದೆ: ದಿಗ್ವಿಜಯ್ ಸಿಂಗ್

Pinterest LinkedIn Tumblr

Digvijaya-Modi

ನವದೆಹಲಿ: ಬಿಜೆಪಿ ಹಿರಿಯ ನಾಯಕರುಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರ ಪ್ರಯತ್ನದ ಫಲವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನುಭವಿಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಲೇವಡಿ ಮಾಡಿದ್ದಾರೆ.

ನೋಟು ನಿಷೇಧದ ನಂತರ ಸಂಸತ್ತಿನಲ್ಲಿ ನಡೆಯುತ್ತಿರುವ ಗದ್ದಲದ ಹಿನ್ನೆಲೆಯಲ್ಲಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಬೇಸರಗೊಂಡು ಲೋಕಸಭೆಯಿಂದ ಹೊರನಡೆದಿದ್ದರು. ಮೋದಿ ಕಾರ್ಯವೈಖರಿಯಿಂದಾಗಿ ಬಿಜೆಪಿ ಹಿರಿಯ ಮುಖಂಡ ನೋವನುಭವಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಯಾರೋಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮೋದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಸಂಘ, ಜನತಾ ಪಾರ್ಟಿ ಮತ್ತು ಬಿಜೆಪಿಗೆ ಅಡ್ವಾಣಿ ನೀಡಿರುವ ಕೊಡುಗೆ ಅಪಾರ, ಅದನ್ನು ಮೋದಿ ನಿರ್ಲಕ್ಷ್ಯಿಸಬಾರದು ಎಂದು ದಿಗ್ವಿಜಯ್ ಸಿಂಗ್ ಕಿವಿಮಾತು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸಲು ಅಟಲ್- ಅಡ್ವಾಣಿ ಅವರ ಶ್ರಮವೇ ಪ್ರಮುಖ ಕಾರಣಎಂದು ಹೇಳಿದ್ದಾರೆ, ಆದರೆ ಹಿರಿಯ ನಾಯಕ ಅಡ್ವಾಣಿ ಅವರನ್ನು ಪಕ್ಷ ನಿರ್ಲಕ್ಷಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Comments are closed.