ರಾಷ್ಟ್ರೀಯ

ಸೌದಿಯಲ್ಲಿ ಹಸಿವಿನಿಂದ ಕಂಗೆಟ್ಟಿದ್ದ 10,000 ಮಂದಿಯಲ್ಲಿ ಯುವಕನೊಬ್ಬ ತಾಯ್ನಡಿಗೆ ಮರಳಲು ವಿಡಿಯೋ ಮೂಲಕ ಬೇಡಿಕೆ

Pinterest LinkedIn Tumblr

soudiನವದೆಹಲಿ: ನೌಕರಿಗಾಗಿ ಸೌದಿ ಅರೇಬಿಯಾಗೆ ತೆರಳಿದ್ದ ಯುವಕನೊಬ್ಬ ತವರಿಗೆ ಮರಳಲು ಸಹಾಯ ಮಾಡುವಂತೆ ಕೇಂದ್ರ ಸರ್ಕಾರವನ್ನು ವಿಡಿಯೋ ಮೂಲಕ ಕೇಳಿಕೊಂಡಿದ್ದಾನೆ. ದುಡ್ಡು ಬೇಡ, ಮನೆಗೆ ಮರಳಿದರಷ್ಟೇ ಸಾಕು ಎಂದು ಸೂರ್ಯಭಾನ್ ವಿಶ್ವಕರ್ಮ ಬೇಡಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಈ ಪ್ರಕರಣವು ಸೌದಿ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನೌಕರರ ಸ್ಥಿತಿಗತಿಗಳ ಕುರಿತು ಚಿಂತಿಸುವಂತೆ ಮಾಡಿದೆ. ಅಲ್ಲಿನ ಕಾನೂನು ಪ್ರಕಾರ ಉದ್ಯೋಗದಾತರ ಅನುಮತಿಯಿಲ್ಲದೆ ನೌಕರರು ಮತ್ತೊಂದು ರಾಷ್ಟ್ರಕ್ಕೆ ತೆರಳುವಂತಿಲ್ಲ.

ಸೂರ್ಯಭಾನ್ ಏಜೆನ್ಸಿಯೊಂದರ ಮುಖಾಂತರ ಸೌದಿಯ ಲಿಮಿಟೆಡ್ ಕಂಪನಿಯಲ್ಲಿ ಕಟ್ಟಡ ಕಾರ್ವಿುಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. 1500 ಧೀರಮ್ ವೇತನ ನೀಡುವುದಾಗಿ ಭರವಸೆ ನೀಡಲಾಗಿತ್ತು. 4 ಗಂಟೆ ಹೆಚ್ಚು ಕೆಲಸ ಮಾಡಿದರೆ ಹೆಚ್ಚಿನ ಸಂಬಳ ನೀಡುವುದಾಗಿ ಹೇಳಲಾಗಿತ್ತು. ಆದರೆ ಕಳೆದ ಒಂದೂವರೆ ತಿಂಗಳಿಂದ ಕೇವಲ 250 ಧೀರಮ್ ವೇತನ ಸಿಕ್ಕಿದೆ. ಉಳಿದ ಮೊತ್ತವನ್ನು ನೀಡುತ್ತಿಲ್ಲ, ಭಾರತಕ್ಕೆ ವಾಪಸಾಗಲು ಅನುಮತಿಯನ್ನೂ ಕೊಡುತ್ತಿಲ್ಲ. ನನಗೆ ಯಾವ ದುಡ್ಡು ಬೇಡ, ಮನೆಗೆ ಹಿಂತಿರುಗಿದರಷ್ಟೇ ಸಾಕು ಎಂದು ವಿಡಿಯೋದಲ್ಲಿ ಬೇಡಿಕೊಂಡಿದ್ದಾನೆ. ಈ ವಿಡಿಯೋವನ್ನು ಅಲ್ಲಿನ ಸಾಮಾಜಿಕ ಕಾರ್ಯಕರ್ತರೊಬ್ಬರು ಸಾಮಾಜಿಕ ತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ದುಬೈನಿಂದ ತವರಿಗೆ ವಾಪಸಾಗಲು ಅನುಮತಿ ಕೋರಿ ನಿತ್ಯ 22 ಕಿ.ಮೀ.ಯನ್ನು ಬರಿಗಾಲಲ್ಲೇ ಕ್ರಮಿಸಿ ಕೋರ್ಟ್ಗೆ ಹಾಜರಾಗುತ್ತಿದ್ದ ತಮಿಳುನಾಡಿನ ತಿರುಚಿರಾಪಳ್ಳಿ ಯುವಕ ಜಗನ್ನಾಥನ್ ಸೆಲ್ವರಾಜ್ಗೆ ಸಹಾಯ ಮಾಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದರು.

ಸೌದಿ ಅರೇಬಿಯಾದಲ್ಲಿ ಹಸಿವಿನಿಂದ ಕಂಗೆಟ್ಟಿದ್ದ 10,000 ಮಂದಿ ಭಾರತೀಯರಿಗೆ ಭಾರತೀಯ ರಾಜತಾಂತ್ರಿಕ ಕಚೇರಿ ಮಧ್ಯಪ್ರವೇಶಿಸಿ ಆಹಾರ ಒದಗಿಸಿತ್ತು.

Comments are closed.