ರಾಷ್ಟ್ರೀಯ

24 ಸಾವಿರ ವಿತ್ ಡ್ರಾ ನೀತಿಯನ್ನು ಯಾಕೆ ಅನುಸರಿಸುತ್ತಿಲ್ಲ: ಸುಪ್ರೀಂ

Pinterest LinkedIn Tumblr

suprimನವದೆಹಲಿ (ಡಿ.09): ನೋಟು ಅಮಾನ್ಯ ಬಳಿಕ ವಾರಕ್ಕೆ ನಿಗದಿಗೊಳಿಸಲಾಗಿದ್ದ 24 ಸಾವಿರ ವಿತ್ ಡ್ರಾ ನೀತಿಯನ್ನು ಯಾಕೆ ಅನುಸರಿಸುತ್ತಿಲ್ಲ ಎಂದು ಸುಪ್ರೀಂ ಕೇಂದ್ರಕ್ಕೆ ತರಾಟೆಗೆ ತೆಗದುಕೊಂಡಿದೆ.
ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಹಣವನ್ನು ವಿತ್ ಡ್ರಾ ಮಾಡುವಲ್ಲಿ ತೊಂದರೆಯಾಗುತ್ತಿದೆ ಎಂದು ಎಷ್ಟು ಜನ ದೂರು ನೀಡಿದ್ದಾರೆ ಎನ್ನುವ ಮಾಹಿತಿ ಕೊಡಿ ಎಂದು ಸುಪ್ರೀಂ ಗೆ ಕೇಳಿದ್ದಾರೆ.
ನೋಟು ಅಮಾನ್ಯದ ಸಾಧಕ-ಬಾಧಕಗಳ ಬಗ್ಗೆ ನ್ಯಾಯಾಲಯ ಪ್ರಶ್ನಿಸಿದಾಗ, ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಲುವಾಗಿ ಇದನ್ನು ಜಾರಿಗೊಳಿಸಲಾಗಿದೆ. ಈ ಪ್ರಕ್ರಿಯೆ ನಿಧಾನವಾಗಿ ನಡೆಯುತ್ತಿದೆ ಎಂದು ರೋಹಟ್ಗಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಪಿ. ಚಿದಂಬರಂ ಮಾತನಾಡಿ, ಅಗತ್ಯಕ್ಕೆ ತಕ್ಕಷ್ಟು ನೋಟು ಮುದ್ರಿಸಲು ಸರ್ಕಾರಕ್ಕೆ ಕನಿಷ್ಟ ಐದು ತಿಂಗಳಾದರೂ ಬೇಕು ಎಂದಿದ್ದಾರೆ.

Comments are closed.