ರಾಷ್ಟ್ರೀಯ

ತ್ರಿವಳಿ ತಲಾಖ್ ಅತ್ಯಂತ ‘ಕ್ರೂರ’, ‘ಅವಹೇಳನಕಾರಿ’: ಅಸಮಾಧಾನ ವ್ಯಕ್ತಪಡಿಸಿದ ಅಲಹಾಬಾದ್‌ ಹೈಕೋರ್ಟ್‌

Pinterest LinkedIn Tumblr

teen-talak

ಅಲಹಾಬಾದ್‌: ತ್ರಿವಳಿ ತಲಾಖ್ ಪದ್ಧತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಲಹಾಬಾದ್ ಹೈಕೋರ್ಟ್‌, ಈ ಪದ್ಧತಿಯು ಅತ್ಯಂತ ಕ್ರೂರ ಹಾಗೂ ಅವಹೇಳನಕಾರಿ ಎಂದು ಅಭಿಪ್ರಾಯಪಟ್ಟಿದೆ.

ದಂಪತಿ ನಡುವೆ ಹೊಂದಾಣಿಕೆಗೆ ಸಾಧ್ಯವೇ ಇಲ್ಲ ಎಂದಾಗ ಕೊನೆ ಕ್ಷಣದಲ್ಲಿ ವಿಚ್ಛೇದನ ನೀಡಬೇಕು ಎಂದು ಮುಸ್ಲಿಂ ಕಾನೂನಿನಲ್ಲಿ ಉಲ್ಲೇಖಿತವಾಗಿದೆ. ದಂಪತಿಯನ್ನು ಒಟ್ಟಿಗೆ ಮಾಡುವ ಎಲ್ಲಾ ವಿಧಾನಗಳು ವಿಫಲವಾದಾಗ ಮಾತ್ರ ‘ತಲಾಖ್‌’ ಮೊರೆ ಹೋಗಬೇಕು. ಆದರೆ, ಈಗ ಈ ಎಲ್ಲಾ ಆಶಯಗಳಿಗೆ ವಿರುದ್ಧವಾಗಿ ಆಚರಣೆ ನಡೆಯುತ್ತಿದೆ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಸ್ವೇಚ್ಛೆ ಮತ್ತು ಏಕಪಕ್ಷಿಯವಾಗಿ ಪತಿಯು ತಲಾಖ್‌ ಹೇಳುವ ಮೂಲಕ ವಿಚ್ಛೇದನ ಪಡೆಯುವುದು ಇಸ್ಲಾಂ ಧಾರ್ಮಿಕ ಕಾಯ್ದೆಗಳ ಅನ್ವಯ ನಿಯಮ ಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪತ್ನಿ ಎಲ್ಲಿಯವರೆಗೆ ಪತಿಗೆ ವಿಶ್ವಾಸಾರ್ಹ ಮತ್ತು ವಿದೇಯಳಾಗಿರುತ್ತಾಳೊ ಅಲ್ಲಿಯವರೆಗೆ ಪತಿ ವಿಚ್ಛೇದನ ನೀಡಲು ಅವಕಾಶ ಇಲ್ಲ ಎಂದು ಕುರಾನ್‌ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ನ.5ರಂದು ನೀಡಿರುವ ಆದೇಶವನ್ನು ಕೋರ್ಟ್‌ ಉಲ್ಲೇಖಿಸಿದೆ.

Comments are closed.