ರಾಷ್ಟ್ರೀಯ

ಸಂಸತ್ ಭವನದಲ್ಲಿ ನಗದು ರಹಿತ ವ್ಯವಸ್ಥೆಗೆ ಸ್ಪೀಕರ್ ಚಾಲನೆ

Pinterest LinkedIn Tumblr

parliament_CUTOUTನವದೆಹಲಿ: ನಗದು ರಹಿತ ಪದ್ಧತಿಯನ್ನು ರೂಢಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿಯ ಸಂಸತ್ ಭವನದಲ್ಲಿ ನಗದು ರಹಿತ ವ್ಯವಸ್ಥೆ ಜಾರಿಗೆ ತರುವ ಮಹತ್ವದ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ. ಸಂಸತ್ ಭವನದ ಆವರಣದಲ್ಲಿರುವ ಕ್ಯಾಂಟೀನ್ ಮತ್ತು ಅಂಗಡಿಗಳಲ್ಲಿ ವಿದ್ಯುನ್ಮಾನ ಹಣ ಪಾವತಿ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಬುಧವಾರ ಈ ವ್ಯವಸ್ಥೆಗೆ ಚಾಲನೆ ನೀಡಿದರು. ಸಂಸತ್ ಭವನದ ಆವರಣದಲ್ಲಿರುವ 19 ಸ್ಥಳಗಳಲ್ಲಿ ನಗದು ವಿದ್ಯುನ್ಮಾನ ಹಣ ಪಾವತಿ ವ್ಯವಸ್ಥೆ ಅಳವಡಿಸಲಾಗಿದೆ. ಸಂಸದರ ಕ್ಯಾಂಟೀನ್, ಮಾಧ್ಯಮ ಪ್ರತಿನಿಧಿಗಳ ಕ್ಯಾಂಟೀನ್ ಸೇರಿದಂತೆ ಎಲ್ಲಾ ಸ್ಥಳಗಳಲ್ಲೂ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಳಸಲು ಅವಕಾಶ ಕಲ್ಪಿಸಲಾಗಿದೆ.

ನೋಟು ರದ್ಧತಿಯ ನಂತರ ಕ್ಯಾಂಟೀನ್ಗಳಲ್ಲಿ ಹಣ ನೀಡಲು ಸಂಸದರು ಮತ್ತು ಜನರಿಗೆ ಕಷ್ಟವಾಗುತ್ತಿತ್ತು. ಜತೆಗೆ ಕ್ಯಾಂಟೀನ್ನಲ್ಲಿ ಸೂಕ್ತ ಪ್ರಮಾಣದ ಚಿಲ್ಲರೆ ಸಿಗುತ್ತಿರಲಿಲ್ಲ. ಹಾಗಾಗಿ ಕಾರ್ಡ್ ಮೂಲಕ ಪಾವತಿ ಮಾಡುವ ವ್ಯವಸ್ಥೆ ಅಳವಡಿಸಲಾಗಿದೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಸಂಸದರು ಮತ್ತು ಜನರು ಹೊಸ ವ್ಯವಸ್ಥೆಯಿಂದ ಖುಷಿಯಾಗಿದ್ದಾರೆ ಎಂದು ಸಂಸತ್ತಿನ ಆಹಾರ ಸಮಿತಿಯ ಅಧ್ಯಕ್ಷ ಎ.ಪಿ.ಜಿತೇಂದರ್ ರೆಡ್ಡಿ ತಿಳಿಸಿದ್ದಾರೆ.

Comments are closed.