ಮುಂಬೈ: ಜಿಯೋ ನೆಟ್ವರ್ಕ್ ಬಳಕೆದಾರರಿಗೆ ಮತ್ತೊಮ್ಮೆ ಬಂಪರ್ ಹೊಡೆದಿದೆ. ಜಿಯೋದ ವೆಲ್ ಕಂ ಆಫರ್ ಉಚಿತ ಸೇವೆಯನ್ನ 2017ರ, ಮಾರ್ಚ್ 31ರವರೆಗೆ ವಿಸ್ತರಣೆ ಮಾಡಿರುವುದಾಗಿ ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಘೋಷಿಸಿದ್ದಾರೆ.
ಹೊಸ ಜಿಯೋ ಸಿಮ್ ಖರೀದಿದಾರರಿಗೂ ಬಂಪರ್ ಆಫರ್ ನೀಡಲಾಗಿದ್ದು, ಜನವರಿ 1 ರಿಂದ ಮಾರ್ಚ್ 31ರವರೆಗೆ ಉಚಿತ ಸೇವೆ ಒದಗಿಸುವ ನ್ಯೂ ಇಯರ್ ವೆಲ್ ಕಮ್ ಆಫರ್ ನೀಡಲಾಗಿದೆ.
ಇದರ ಜೊತೆಗೆ ವ್ಯಾಪಾರಿಗಳಿಗಾಗಿ ಜಿಯೋ ಡಿಜಿಟಲ್ ಮನಿ ಟ್ರಾನ್ಸ್`ಫರ್ ಸಲ್ಯೂಶನ್ ಅನ್ನ ಪರಿಚಯಿಸುವುದಾಗಿ ಅಂಬಾನಿ ಘೋಷಿಸಿದ್ದಾರೆ. ಈ ಅಪ್ಲಿಕೇಶನ್ ಮೂಲಕ್ ವ್ಯಾಪಾರಸ್ಥರು ಹಣ ಪಾವತಿಸಬಹುದು ಮತ್ತು ಹಣವನ್ನ ಪಡೆಯಬಹುದಾಗಿದೆ. ಕಳೆದ 3 ತಿಂಗಳಲ್ಲಿ ಜಿಯೋ ಫೇಸ್ಬುಕ್, ವಾಟ್ಸಾಪ್ ಮತ್ತು ಸ್ಕೈಪ್`ಗಳನ್ನ ಮೀರಿ ಬೆಳೆದಿದೆ ಎಂದಿದ್ದಾರೆ.
ಜಿಯೋ ಕಡಿಮೆ ಅವಧಿಯಲ್ಲಿ 5 ಲಕ್ಷ ಗ್ರಾಹರನ್ನು ತಲುಪುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಕೇವಲ 83 ದಿನದಲ್ಲಿ 5 ಲಕ್ಷ ಗ್ರಾಹಕರನ್ನು ಸಂಪಾದಿಸುವ ಮೂಲಕ ಫೇಸ್ ಬುಕ್, ಸ್ಕೈಪ್, ವಾಟ್ಸಾಪ್ ಸೇರಿದಂತೆ ವಿಶ್ವದ ಯಾವೊಂದು ಕಂಪೆನಿ ಮಾಡದ ವಿಶೇಷ ಸಾಧನೆಯನ್ನು ಜಿಯೋ ಮಾಡಿದೆ ಎಂದು ತಿಳಿಸಿದರು.
ಆರಂಭದಲ್ಲಿ ಟೆಲಿಕಾಂ ಕಂಪೆನಿಗಳು ಕರೆಯನ್ನು ಕಡಿತಗೊಳಿಸುತ್ತಿದ್ದವು. ಸರ್ಕಾರ ಮತ್ತು ಟ್ರಾಯ್ ಮಧ್ಯಪ್ರವೇಶಿಸಿದ ಕಾರಣ ಸಮಸ್ಯೆ ನಿವಾರಣೆಯಾಗಿದೆ. ಗ್ರಾಹಕರು ಹೆಚ್ಚಿನ ಪ್ರಮಾಣದ ಡೇಟಾ ಬಳಸುತ್ತಿರುವ ಕಾರಣ ಕೆಲವು ಕಡೆ ಸಮಸ್ಯೆ ಆಗಿದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಯೋ ಕಾರ್ಯನಿರ್ವಹಿಸುತ್ತಿದೆ ಎಂದರು.
ಗ್ರಾಹಕರು ಜಿಯೋ ಸಿಮ್ ಪಡಯಲು ಯಾವುದೇ ಕಷ್ಟಪಡಬೇಕಿಲ್ಲ. ಇ ಕೆವೈಸಿ ಮೂಲಕ ಮನೆಯಲ್ಲಿ ಕುಳಿತು 5 ನಿಮಿಷದಲ್ಲಿ ಜಿಯೋ ಕುಟುಂಬದ ಸದಸ್ಯ ರಾಗಬಹುದು. ಕೆಲ ದಿನಗಳ ಹಿಂದೆ ನಾವು ಈ ಸೇವೆಯನ್ನು ಆರಂಭಿಸಿದ್ದೇವೆ ಎಂದು ಮುಖೇಶ್ ಅಂಬಾನಿ ತಿಳಿಸಿದರು
ಮುಖೇಶ್ ಹೇಳಿದ್ದು..
– 3 ತಿಂಗಳಲ್ಲಿ ಜಿಯೋ ಫೇಸ್ಬುಕ್, ವಾಟ್ಸಾಪ್ ಮತ್ತು ಸ್ಕೈಪ್`ಗಳನ್ನ ಮೀರಿ ಬೆಳೆದಿದೆ
– 50 ಮಿಲಿಯನ್ ದಾಟಿದ ಬಳೆಕೆದಾರರ ಸಂಖ್ಯೆ
– ವೇಗವಾಗಿ ಬೆಳೆಯುತ್ತಿರುವ ಸಂಸ್ಥೆ ಜಿಯೋ
– ಜಿಯೋ ಇಂಟರ್ನೆಟ್`ಗೆ ಬಲಿಷ್ಠ ನೆಟ್ವರ್ಕ್ ಸೃಷ್ಟಿಸಿದೆ
Comments are closed.