ರಾಷ್ಟ್ರೀಯ

ಸೇನೆಯನ್ನು ಗಂಭೀರ ಅಪಾಯದಿಂದ ಪಾರು ಮಾಡಿದ ಸೈನಿಕರಿಬ್ಬರ ಪತ್ನಿಯರು!

Pinterest LinkedIn Tumblr

indian-armyನವದೆಹಲಿ(ನ.30): ನಗ್ರೋಟಾದಲ್ಲಿ ಉಗ್ರ ದಾಳಿಯ ವೇಳೆ ಇಬ್ಬರು ಯೋಧರ ಪತ್ನಿಯರು ತೋರಿಸಿದ ಸಾಹಸ, ಭಾರತೀಯ ಸೇನೆಯನ್ನು ದೊಡ್ಡ ಅಪಾಯದಿಂದ ಪಾರು ಮಾಡಿದೆ.
ಸೈನಿಕರ ವಸತಿ ಪ್ರದೇಶಕ್ಕೆ ನುಗ್ಗಿದ ಮೂವರು ಶಸ್ತ್ರಸಜ್ಜಿತ ಉಗ್ರರು ಅಧಿಕಾರಿಗಳ ಕುಟುಂಬ ಮತ್ತು ಸೈನಿಕರು ವಾಸವಿದ್ದ ಕಟ್ಟಡಗಳನ್ನು ವಶಕ್ಕೆ ಪಡೆಯಲು ತೀವ್ರ ಯತ್ನ ನಡೆಸಿದ್ದರು. ಆದರೆ, ಅದೇ ಕಟ್ಟಡದಲ್ಲಿ ಆರು ಮತ್ತು 18 ತಿಂಗಳ ಎರಡು ಹಸುಗೂಸುಗಳೊಂದಿಗೆ ವಾಸವಿದ್ದ ಇಬ್ಬರು ಅಧಿಕಾರಿಗಳ ಪತ್ನಿಯರು, ಮನೆಯಲ್ಲಿದ್ದ ಸಲಕರಣೆಗಳನ್ನೇ ಬಳಸಿ ಉಗ್ರರು ಕಟ್ಟಡ ಪ್ರವೇಶಿಸದಂತೆ ತಡೆದರು.
ಆತ್ಮಹತ್ಯಾ ಜಾಕೆಟ್‌, ಗ್ರೆನೇಡ್‌ ಹಾಗೂ ಸ್ವಯಂಚಾಲಿತ ರೈಫಲ್‌’ಗಳಿಂದ ಸಜ್ಜಿತರಾಗಿದ್ದ ಉಗ್ರರಿಗೆ ಮಹಿಳೆಯರಿಬ್ಬರ ದಾಳಿಯನ್ನು ಎದುರಿಸಿ ನಿಲ್ಲವುದೇ ಕಷ್ಟವಾಯಿತು. ಅವರು ಕಟ್ಟಡ ಪ್ರವೇಶಿಸಲಾಗದೇ ಹಿಂದಕ್ಕೆ ಸರಿದರು. ಸೈನಿಕರ ಕ್ವಾಟ್ರಸ್‌ ಪ್ರವೇಶಿಸಲಾಗದೇ ಹಿಮ್ಮೆಟ್ಟಿದ ಉಗ್ರರನ್ನು ಆಗಲೇ ಎಚ್ಚರಗೊಂಡಿದ್ದ ಯೋಧರು ಸುತ್ತುವರಿದರು.
ಉಗ್ರರೊಂದಿಗಿನ ಕಾಳಗದಲ್ಲಿ ಮೂವರು ಯೋಧರು ಹುತಾತ್ಮರಾದರೂ, ಮಹಿಳೆಯರ ಸಾಹಸ ಸಂಭವಿಸಬಹುದಾಗಿದ್ದ ಭಾರಿ ದುರಂತವನ್ನು ತಪ್ಪಿಸಿದೆ. ಮಹಿಳೆಯರು ಹೋರಾಡಿದ ಕಟ್ಟಡದಲ್ಲಿ ಎರಡು ಹಸುಗೂಸುಗಳಲ್ಲದೇ 12ಕ್ಕೂ ಅಧಿಕ ಯೋಧರು ತಂಗಿದ್ದರು. ಇವರೆಲ್ಲರೂ ಉಗ್ರರಿಗೆ ಒತ್ತೆಸೆರೆ ಸಿಕ್ಕಿದ್ದರೆ ದೊಡ್ಡ ಅನಾಹುತ ಖಚಿತವಾಗಿತ್ತು.

Comments are closed.