ರಾಷ್ಟ್ರೀಯ

ಸರ್ಕಾರ ಕಾಳಧನಿಕರಿಗೆ ಅರ್ಧದಷ್ಟು ಕಪ್ಪುಹಣವನ್ನು ಹಿಂದಿರುಗಿಸುತ್ತಿದೆ: ರಾಹುಲ್

Pinterest LinkedIn Tumblr

rahulನವದೆಹಲಿ (ನ.30): ಆದಾಯ ತೆರಿಗೆ ನೀತಿಗೆ ತಿದ್ದುಪಡಿಯನ್ನು ತರುವುದರ ಮೂಲಕ ಸರ್ಕಾರ ಕಾಳಧನಿಕರಿಗೆ ಸಹಾಯ ಮಾಡುತ್ತಿದೆ. ಲೆಕ್ಕಕ್ಕೆ ಸಿಗದ ಅರ್ಧದಷ್ಟು ಹಣವನ್ನು ಅವರಿಗೆ ಹಿಂತಿರುಗಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನಿನ್ನೆ ತೆರಿಗೆ ನೀತಿ ಮಸೂದೆಯನ್ನು ಲೋಕಸಭೆಯಲ್ಲಿ ಅನುಮೋದನೆ ಮಾಡಲಾಗಿದೆ. ಈ ಮಸೂದೆಯಲ್ಲಿ ನೋಟು ನಿಷೇಧದ ಬಳಿಕ ಕಪ್ಪುಹಣವನ್ನು ಕಾನೂನಾತ್ಮಕಗೊಳಿಸಿಕೊಳ್ಳಲು ದಾರಿ ಮಾಡಿಕೊಟ್ಟಂತಾಗಿದೆ. ಜೊತೆಗೆ ಮಸೂದೆ ಪ್ರಕಾರ ಬ್ಯಾಂಕಿನಲ್ಲಿ ಕಪ್ಪುಹಣವನ್ನು ಘೋಷಿಸಿದವರಿಗೆ ಶೇ.50 ರಷ್ಟು ತೆರಿಗೆ ಹಾಕಲಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ನಾಗ್ರೋಟಾ ದಾಳಿಯ ಬಗ್ಗೆ ಪ್ರಸ್ತಾಪಿಸುತ್ತಾ “ ಯಾರಾದರೂ ಮರಣ ಹೊಂದಿದರೆ ಅವರ ಗೌರವಾರ್ಥವಾಗಿ ಸಂಸತ್ ನಲ್ಲಿ ಸಂತಾಪ ಸೂಚಿಸುವುದು ವಾಡಿಕೆ. ಆದರೆ ಇದೇ ಮೊದಲ ಬಾರಿಗೆ ನಾಗ್ರೋಟಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಸಂತಾಪ ಸೂಚಿಸದೇ ಸಂಸದರು ಹೊರನಡೆದಿದ್ದಾರೆ” ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.