ರಾಷ್ಟ್ರೀಯ

ಮೋದಿಗೆ ತಮ್ಮ ಬ್ಯಾಂಕ್ ಖಾತೆಯನ್ನು ಬಹಿರಂಗಪಡಿಸಲು ಸಾಧ್ಯವಿದೆಯೇ?: ಮಮತಾ ಬ್ಯಾನರ್ಜಿ

Pinterest LinkedIn Tumblr

mamata-e1472470251325ಲಕ್ನೋ: ಬಿಜೆಪಿ ಸಂಸದರ ಮತ್ತು ಶಾಸಕರ ಬ್ಯಾಂಕ್ ಖಾತೆಯ ದಾಖಲೆಗಳನ್ನು ಬಹಿರಂಗಪಡಿಸಬೇಕೆಂದು ಆದೇಶ ಹೊರಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಬ್ಯಾಂಕ್ ದಾಖಲೆಗಳನ್ನು ಬಹಿರಂಗ ಪಡಿಸುವ ಧೈರ್ಯವಿದೆಯೇ? ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲೆಸೆದಿದ್ದಾರೆ.

ನೋಟು ರದ್ದತಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಮೋದಿಯವರು ಸಾಮಾನ್ಯ ಜನರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಆರೋಪಿಸಿದ್ದಾರೆ.

ನೋಟುರದ್ದತಿ ವಿರುದ್ಧ ಲಕ್ನೋದಲ್ಲಿ ಸಮಾಜವಾದಿ ಪಕ್ಷ ಹಮ್ಮಿಕೊಂಡ ಪ್ರತಿಭಟನಾ ರ್ಯಾಲಿಯಲ್ಲಿ ಮಮತಾ ಈ ಮಾತನ್ನಾಡಿದ್ದಾರೆ.

ಗರಿಷ್ಠ ಮುಖಬೆಲೆಯ ನೋಟುಗಳನ್ನುರದ್ದು ಮಾಡಿರುವುದರಿಂದ ಅಂಗಡಿಗಳು, ಮಾರುಕಟ್ಟೆಗಳು, ಕೃಷಿ ಕಾರ್ಯಗಳು ಸ್ಥಗಿತಗೊಂಡಿವೆ. ಆದ್ದರಿಂದ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯುವವರೆಗೆ ನಾವು ಹೋರಾಟ ನಡೆಸುತ್ತೇವೆ ಎಂದಿದ್ದಾರೆ.

ಮೋದಿಯವರ ಬ್ಯಾಂಕ್ ದಾಖಲೆಗಳನ್ನು ಅಮಿತ್ ಷಾ ಅವರಿಗೆ ಸಲ್ಲಿಸುವ ಧೈರ್ಯ ಅವರಿಗಿದೆಯೇ? ತಮ್ಮ ಪಕ್ಷದ ಶಾಸಕರು ಮತ್ತು ಸಂಸದರು ಬ್ಯಾಂಕ್ ದಾಖಲೆಗಳನ್ನು ಅಮಿತ್ ಷಾ ಅವರಿಗೆ ಸಲ್ಲಿಸಬೇಕೆಂದು ಮೋದಿ ಹೇಳುತ್ತಿದ್ದಾರೆ. ಆದರೆ ಮೋದಿ ಮತ್ತು ಅಮಿತ್ ಷಾ ತಮ್ಮ ದಾಖಲೆಗಳನ್ನು ಬಹಿರಂಗ ಪಡಿಸಿ ಈ ನಿರ್ಧಾರಕ್ಕೆ ಚಾಲನೆ ನೀಡಲಿ ಎಂದು ಮಮತಾ ಒತ್ತಾಯಿಸಿದ್ದಾರೆ.

ನೋಟು ರದ್ದು ನಿರ್ಧಾರ ಪ್ರಕಟಿಸುವ ಮುನ್ನ ಬಿಜೆಪಿ ಮತ್ತು ಅದರ ಅಧ್ಯಕ್ಷರ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಲಾಗಿತ್ತು ಎಂದು ಹೇಳಿದ ಮಮತಾ, ನೋಟು ರದ್ದತಿ ಎಂಬುದು ದೊಡ್ಡ ಹಗರಣವಾಗಿದೆ. ಇದೊಂದು ಬ್ಲಾಕ್ ಎಮರ್ಜೆನ್ಸಿ ಎಂದ ‘ದೀದಿ’, ನೋಟು ರದ್ದತಿ ವಿರುದ್ಧ ನಡೆಯುತ್ತಿರುವ ಜನರ ಚಳವಳಿಯನ್ನು ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಸಿದ್ದಾರೆ.

ಮೋದಿಯವರಿಗೆ ದೇಶಕ್ಕೆ ಆಪತ್ತು ಬಂದಿರುವುದಿಂದ ಅವರ ವಿರುದ್ಧ ನಡೆಸುವ ಹೋರಾಟವನ್ನು ಕೈಬಿಡಬಾರದು ಎಂದು ಮಮತಾ ಹೇಳಿದ್ದಾರೆ.

Comments are closed.