ನವದೆಹಲಿ: ಭಾರತದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 10 ಲಕ್ಷ ಯುನಿಟ್ ಕ್ಸಿಯೋಮಿ ರೆಡ್ ಮಿ 3ಎಸ್ ಮೊಬೈಲ್ ಗಳು ಮಾರಾಟಾವಾಗಿದೆ ಎಂದು ಫ್ಲಿಪ್ ಕಾರ್ಟ್ ಹೇಳಿದೆ.
ಚೀನಾ ಉತ್ಪಾದಿತ ಕ್ಸಿಯೋಮಿ ರೆಡ್ ಮಿ 3 ಎಸ್ ಮೊಬೈಲ್ 2016ರ ಆಗಸ್ಟ್ ನಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯವಾಗಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಕ್ಸಿಯೋಮಿ ರೆಡ್ ಮಿ ಮಾರಾಟದ ಬಗ್ಗೆ ಮಾಹಿತಿ ನೀಡಿರುವ ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ಕ್ಸಿಯೋಮಿ ರೆಡ್ ಮಿ 3 ಎಸ್ ಮಾರುಕಟ್ಟೆಗೆ ಪರಿಚಯವಾದ ಕೇವಲ 4 ತಿಂಗಳಲ್ಲೇ 10 ಲಕ್ಷ ಯುನಿಟ್ ಗಳಷ್ಟು ಮಾರಾಟವಾಗಿದೆ ಎಂದು ಟ್ವೀಟ್ ಮಾಡಿದೆ.
3 ಜಿಬಿ ರ್ಯಾಂ 32 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ರೆಡ್ ಮಿ ಮೊಬೈಲ್ ನ್ನು ಭಾರತೀಯ ಮಾರುಕಟ್ಟೆಯಲ್ಲಿ 6,999 ರೂಗಳಿಗೆ ಪರಿಚಯಿಸಲಾಗಿತ್ತು. ಫಿಂಗರ್ ಪ್ರಿಂಟ್ ಸೆನ್ಸಾರ್ ಹೊಂದಿರುವ ರೆಡ್ ಮಿ ಪ್ರೈಮ್ ಸ್ಮಾರ್ಟ್ ಫೋನ್ ಗಳನ್ನು ರೂ. 8,999 ರೂಪಾಯಿಗಳಿಗೆ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು.