ರಾಷ್ಟ್ರೀಯ

ವಶಪಡಿಸಿಕೊಂಡಿದ್ದ ಹಳೆಯ 500-1000 ರೂ.ನ 3.5 ಕೋಟಿ ನಾಪತ್ತೆ!

Pinterest LinkedIn Tumblr

noteಗುವಾಹಟಿ: ಆದಾಯ ತೆರಿಗೆ ಇಲಾಖೆ ವ್ಯಕ್ತಿಯೊಬ್ಬರಿಂದ ವಶಪಡಿಸಿಕೊಂಡಿದ್ದ 3.5 ಕೋಟಿ ರೂ. ಹಣ ಕೆಲವೇ ಗಂಟೆಗಳಲ್ಲಿ ನಾಪತ್ತೆಯಾಗಿರುವ ಘಟನೆ ನಾಗಾಲ್ಯಾಂಡ್‍ನಲ್ಲಿ ನಡೆದಿದೆ.

ಮಂಗಳವಾರ ಬಾಡಿಗೆ ಜೆಟ್ ವಿಮಾನದಲ್ಲಿ ಬಾಡಿಗೆ ಜೆಟ್ ವಿಮಾನದಲ್ಲಿ ಹರಿಯಾಣದ ಹಿಸ್ಸಾರನಿಂದ ನಾಗಾಲ್ಯಾಂಡ್‍ನ ದಿಮಾಪುರ ವಿಮಾನ ನಿಲ್ದಾಣಕ್ಕೆ ಬಂದ ಉದ್ಯಮಿ ಅಮರಜಿತ್ ಕುಮಾರ್ ಸಿಂಗ್ ಎಂಬಾತನ್ನು ಖಚಿತ ಮಾಹಿತಿಯ ಮೇರೆಗೆ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಪೊಲೀಸರು ಬಂಧಿಸಿದ್ದರು. ಆದರೆ ಅಮರಜಿತ್‍ನಿಂದ ವಶಪಡಿಸಿಕೊಳ್ಳಲಾಗಿದ್ದ ಹಳೆ ನೋಟ್‍ಗಳಿದ್ದ 3.5 ಕೋಟಿ ರೂ. ಹಣವು ಬಳಿಕ ಕಲವೇ ಗಂಟೆಯಲ್ಲಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ನಾಗಾಲ್ಯಾಂಡ ದಿಮಾಪುರದ ಏರ್‍ಪೋರ್ಟ್‍ನಲ್ಲಿ ಬೆಳಗ್ಗೆ 10:07ಕ್ಕೆ ವಶಪಡಿಸಿಕೊಂಡಿದ್ದ ಹಣ ಮಧ್ಯಾಹ್ನ 12:15ರಲ್ಲಿ ನಾಪತ್ತೆಯಾಗಿ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಮೊದಲಿಗೆ 5.5 ಕೋಟಿ ರೂ. ಹಣ ವಶ ಪಡೆಯಲಾಗಿದೆ ಎಂದು ಹೇಳಲಾಗಿತ್ತು, ಅದರೆ ಕೊನೆಯದಾಗಿ 3.5 ಕೋಟಿ ರೂ. ಹಣ ಎಂದು ಐಟಿ ಮೂಲಗಳು ತಿಳಿಸಿದ್ದವು.

ದೆಹಲಿಯ ದೊಡ್ಡ ಉದ್ಯಮಿ ಇಷ್ಟು ದೊಡ್ಡ ಮೊತ್ತವನ್ನು ನಾಗಾ ಉದ್ಯಮಿಗೆ ತಲುಪಿಸಲು ಇದನ್ನು ಕಳುಹಿಸಿರಬಹುದು ಎಂದು ಶಂಕಿಸಲಾಗಿದೆ. ನಿಗೂಢವಾಗಿ ನಾಪತ್ತೆಯಾಗಿರುವ 3.5 ಕೋಟಿ ರೂ. ಹಣ ಯಾರಿಗೆ ತಲುಪಿದೆ ಎಂಬುದರ ಬಗ್ಗೆ ಈಗ ಕೇಂದ್ರಿಯ ಗುಪ್ತಚರ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Comments are closed.