ರಾಷ್ಟ್ರೀಯ

21 ದಿನಗಳ ಬದಲಾಗಿ 6 ದಿನಗಳೊಳಗೆ ಹಣ ರವಾನೆಗೆ ಸೂಚಿಸಿದ ಕೇಂದ್ರ

Pinterest LinkedIn Tumblr

notetst-2000-fiನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ಯಾಂಕುಗಳಿಗೆ ಹಣ ರವಾನೆ ಮಾಡುವ ಕಾಲಾವಧಿಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದ್ದು, ಇನ್ನು ಆರು ದಿನಗಳೊಳಗೆ ಬ್ಯಾಂಕುಗಳಿಗೆ ಹೊಸ ನೋಟುಗಳನ್ನು ರವಾನೆ ಮಾಡುವಂತೆ ಡೆಡ್ ಲೈನ್ ನೀಡಲಾಗಿದೆ.
ನೋಟು ನಿಷೇಧ ಮಾಡಿ ಸತತ 12 ದಿನಗಳೇ ಕಳೆದರೂ ದೇಶಾದ್ಯಂತ ಆರ್ಥಿಕ ಬಿಕ್ಕಟ್ಟು ಮಾತ್ರ ಕಡಿಮೆಯಾಗಿಲ್ಲ. ಹಣ ಬದಲಾವಣೆಗಾಗಿ ಇನ್ನೂ ಬ್ಯಾಂಕುಗಳ ಮುಂದೆ ಜನರ ಸರತಿ ಸಾಲು ಮುಂದುವರೆದಿದ್ದು, ಜನರ ಭವಣೆ ನೀಗಿಸುವಲ್ಲಿ ಬ್ಯಾಂಕುಗಳ ಸಫಲವಾಗುತ್ತಿಲ್ಲ. ನೋಟು ನಿಷೇಧದ ಬಳಿಕದ ಮೊದಲ ವಾರದಲ್ಲಿ ಹೆಚ್ಚುವರಿ ಸಮಯ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದರೂ, ಹೊಸ ನೋಟುಗಳ ಅಭಾವದಿಂದಾಗಿ ಬ್ಯಾಂಕುಗಳು ಸಾಮಾನ್ಯ ಸಮಯದಂತೆಯೇ ಮುಚ್ಚಲ್ಪಟ್ಟಿದ್ದವು. ಇದರಿಂದ ಜನ ತೀವ್ರ ಆಕ್ರೋಶಗೊಂಡಿದ್ದರು.
ಇದೇ ಪರಿಸ್ಥಿತಿ ಈಗಲೂ ಮುಂದುವರೆದಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಬ್ಯಾಂಕುಗಳಿಗೆ ಹಣ ರವಾನೆಗೆ ನೀಡಲಾಗಿರುವ ಸಮಾಯಾವಕಾಶವನ್ನು 21 ದಿನಗಳ ಬದಲಿಗೆ 6 ದಿನಕ್ಕೆ ಕಡಿತಗೊಳಿಸಿದೆ. ಇದಕ್ಕಾಗಿ ಎಲ್ಲ ಬಗೆಯ ಸಾರಿಗೆ ಸೇವೆಯನ್ನು ಬಳಕೆ ಮಾಡಿಕೊಳ್ಳುಲ ಕೇಂದ್ರ ಸರ್ಕಾರ ಮುಂದಾಗಿದ್ದು, ವಾಯು, ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಹಣ ವರ್ಗಾವಣೆ ಮಾಡಲು ನಿರ್ಧರಿಸಿದೆ. ಅದರಂತೆ ತುರ್ತು ಅಗತ್ಯಗಳಿಗಾಗಿ ಹಣ ರವಾನೆ ಮಾಡಲು ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಗಳನ್ನು ಮತ್ತು ವಾಯುಪಡೆಯ ವಿಮಾನಗಳನ್ನೂ ಬಳಸಿಕೊಳ್ಳುವಂತೆ ಸೂಚನೆ ನೀಡಿದೆ.
ಮುಂದಿನ ವಾರಾಂತ್ಯದೊಳಗೆ ಆರ್ಥಿಕ ಬಿಕ್ಕಟ್ಟನ್ನು ತಹಬದಿಗೆ ತರಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ನಗರ ಪ್ರದೇಶಗಳಲ್ಲಿ ಹೊಸ ನೋಟುಗಳ ಲಭ್ಯತೆ ಸಮಾಧಾನಕರವಾಗಿದ್ದರೂ, ಹಲವು ನಗರಗಳಲ್ಲಿ ಇಂದಿಗೂ ಹೊಸ ನೋಟುಗಳ ಅಭಾವ ಕಂಡುಬರುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಇನ್ನು 2017 ಜನವರಿ 15ರ ಹೊತ್ತಿಗೆ ದೇಶದ ಆರ್ಥಿಕ ವ್ಯವಸ್ಥೆ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನೋಟು ನಿಷೇಧ ಬಳಿಕ ಭಾರತೀಯ ಷೇರುಮಾರುಕಟ್ಟೆ ಸತತ ಕುಸಿತಕಂಡಿತ್ತು. ರುಪಾಯಿಮೌಲ್ಯ ಕುಸಿದು, ಚಿನ್ನದ ಬೆಲೆ ಕೂಡ ಗಗನಕ್ಕೇರಿತ್ತು.

Comments are closed.