ರಾಷ್ಟ್ರೀಯ

ನೋಟು ನಿಷೇಧದ ವಿರುದ್ಧ ಟಿಡಿಪಿ ಸಂಸದ ಮಾಡಿದ ವಿನೂತನ ಪ್ರತಿಭಟನೆ ಏನು ಗೊತ್ತಾ..? ನೀವೇ ನೋಡಿ….

Pinterest LinkedIn Tumblr

tdp-mp-n-sivaprasad

ತಿರುಪತಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ 500, 1000 ರೂ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಬೇಕೆಂದು ಪತ್ರ ಬರೆದು ಸಲಹೆ ನೀಡಿದ್ದ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಅವರ ಪಕ್ಷದ ಸಂಸದರೊಬ್ಬರು ಕೇಂದ್ರ ಸರ್ಕಾರ 500, 1000 ರೂ ನೋಟುಗಳನ್ನು ನಿಷೇಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.

ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿರುವ ಟಿಡಿಪಿ ಸಂಸದ ಎನ್ ಶಿವಪ್ರಸಾದ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಬ್ಯಾಂಕ್ ಬ್ರಾಂಚ್ ನ ಮುಂಭಾಗದಲ್ಲಿ ಜಾನಪದ ಕಲಾವಿದನ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ವೀಣೆಯನ್ನು ಕೈಯ್ಯಲ್ಲಿ ಹಿಡಿದು ಬುರ್ರಕಥಾ ಗಾಯನವನ್ನು ನಡೆಸುವ ಮೂಲಕ 1000, 500 ರೂ ನೋಟುಗಳ ಚಲಾವಣೆ ರದ್ದುಗೊಂಡಿರುವುದರಿಂದ ಜನಸಾಮಾನ್ಯರಿಗೆ ಉಂಟಾಗಿರುವ ಸಂಕಷ್ಟವನ್ನು ಎತ್ತಿತೋರಿಸಲು ಟಿಡಿಪಿ ಸಂಸದ ಶಿವಪ್ರಸಾದ್ ಯತ್ನಿಸಿದ್ದಾರೆ.

ಬುರ್ರಕಥೆ ತೆಲುಗಿನಲ್ಲಿ ಜನಪ್ರಿಯವಾದ ಜಾನಪದ ಕಲೆಯಾಗಿದ್ದು, ಸಂಸದ ಶಿವಪ್ರಕಾಶ್ ರೈತರೊಂದಿಗೆ ಬುರ್ರಕಥೆ ಕಲೆಯನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದ್ದು, ಜನಸಾಮಾನ್ಯರ ಸಂಕಷ್ಟವನ್ನು ನಿವಾರಿಸಲು ಪರ್ಯಾಯವಾದ ಮಾರ್ಗವನ್ನು ಕಂಡುಕೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ಒಳ್ಳೆಯ ದಿನಗಳು ಕಪ್ಪುಹಣ ಹೊಂದಿರುವವರಿಗೆ ಬಂದಿದೆಯೋ ಅಥವಾ ಸಾಮಾನ್ಯ ಜನರಿಗೆ ಬಂದಿದೆಯೋ ಎಂದು ಶಿವಪ್ರಕಾಶ್ ಪ್ರಶ್ನಿಸಿದ್ದಾರೆ.

Comments are closed.