ರಾಷ್ಟ್ರೀಯ

ಇಂದೋರ್-ಪಾಟ್ನಾ ರೈಲು ದುರಂತ; ಸಾವಿನ ಸಂಖ್ಯೆ 127 ಕ್ಕೇರಿಕೆ: ಆಸ್ಪತ್ರೆಯಲ್ಲಿರುವ ಗಾಯಾಳುಗಳಿಗೆ ಕಪ್ಪು ಹಣ ಹಂಚಿಕೆ

Pinterest LinkedIn Tumblr

Resque works is in full swing after Patna Endore exxpress derail at pukhrayan village near kanpur on sunday.Express photo by Vishal Srivastav 20.11.2016

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಪುಖರಾಯ ರೈಲ್ವೇ ನಿಲ್ದಾಣ ಸಮೀಪ ನಡೆದ ಇಂದೋರ್-ಪಾಟ್ನಾ ರೈಲು ದುರಂತ ಪ್ರಕರಣದಲ್ಲಿ ಸಾವಿಗೀಡಾವರ ಸಂಖ್ಯೆ 127ಕ್ಕೇರಿಕೆಯಾಗಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಇಬ್ಬರು ಗಾಯಾಗಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಘಟನೆಯಲ್ಲಿ 200 ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗದೆ ದಾಖಲು ಮಾಡಲಾಗಿದೆ. ಅಪಘಾತಕ್ಕೀಡಾದ ರೈಲಿನಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಜನರನ್ನು ತೆರವುಗೊಳಿಸಲಾಗಿರುವ ಬೋಗಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಹಲವು ವೈದ್ಯರು. ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸೇರಿದಂತೆ ಸುಮಾರು 250ಕ್ಕೂ ಅಧಿಕ ಮಂದಿ ಪಾಲ್ಗೊಂಡು ಕಾರ್ಯಾಚರಣೆ ನಡೆಸಿದ್ದಾರೆ.

ಗಾಯಾಳುಗಳಿಗೆ ಕಪ್ಪುಹಣ ಹಂಚಿದ ಕಾಳಧನಿಕರು!
ಅತ್ತ ಇಡೀ ದೇಶವೇ ರೈಲು ಅಪಘಾತಕ್ಕೆ ಆಘಾತ ವ್ಯಕ್ತಪಡಿಸುತ್ತಿದ್ದರೆ ಇತ್ತ ಕೇಂದ್ರ ಸರ್ಕಾರದ ನೋಟು ನಿಷೇಧದಿಂದ ಕಂಗಾಲಾಗಿರುವ ಕಾಳಧನಿಕರು ತಮ್ಮ ಬಳಿ ಇರುವ ಕಪ್ಪುಹಣವನ್ನು ಹಂಚಿಕೆ ಮಾಡಲು ಮಾರ್ಗವೊಂದನ್ನು ಹುಡುಕಿಕೊಂಡಿದ್ದಾರೆ. ರೈಲು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ಗಾಯಾಳುಗಳ ಬಳಿಗೆ ತೆರಳಿದ ಕೆಲವು ಅನಾಮಿಕ ವ್ಯಕ್ತಿಗಳು ಪ್ರತಿಯೊಬ್ಬರಿಗೂ ತಲಾ 5 ಸಾವಿರು ರು.ಗಳಂತೆ ಲಕ್ಷಾಂತರ ಹಣವನ್ನು ಹಂಚಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹೀಗೆ ಆಸ್ಪತ್ರೆಗಳಲ್ಲಿ ಹಂಚಿಕೆ ಮಾಡಲಾದ ಹಣವೆಲ್ಲವೂ ಈ ನವೆಂಬರ್ 8ರಂದು ಕೇಂದ್ರ ಸರ್ಕಾರ ನಿಷೇಧಿಸಿದ್ದ 500 ಮತ್ತು 1000 ರು.ಮುಖಬೆಲೆಯ ನೋಟುಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಹಣ ಹಂಚಿಕೆ ಮಾಡಿದ ಅನಾಮಿಕ ವ್ಯಕ್ತಿಗಳಿಗೆ ತೀವ್ರ ಶೋಧ ನಡೆಸುತ್ತಿದ್ದಾರೆ. ಅಂತೆಯೇ ಆಸ್ಪತ್ರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರ ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಕಾಳಧನಿಕರು ತಮ್ಮ ಬಳಿ ಇರುವ ಕಪ್ಪುಹಣವನ್ನು ಹಂಚಿಕೆ ಮಾಡಿಕೊಳ್ಳಲು ಮಾರ್ಗ ಹುಡುಕೊಂಡಿರುವಂತೆಯೇ ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೋಟು ನಿಷೇಧದ ಪರಿಣಾಮ ಹಣ ವ್ಯರ್ಥವಾಗುವ ಬದಲು ಕನಿಷ್ಠ ಗಾಯಾಳುಗಳಿಗೆ ಚಿಕಿತ್ಸೆಗೆ ಉಪಯೋಗವಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

Comments are closed.