ರಾಷ್ಟ್ರೀಯ

ರಾಹುಲ್ ಹಾಕುವುದು ಇಟೆಲಿ ಕನ್ನಡಕ: ಅಮಿತ್ ಷಾ

Pinterest LinkedIn Tumblr

20-amith-shah-webಚಂಡೀಗಢ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಮತ್ತೊಮ್ಮೆ ಅಪಹಾಸ್ಯ ಮಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ರಾಹುಲ್ ಗಾಂಧಿಯವರು ಇಟೆಲಿ ಕನ್ನಡಕವನ್ನು ಹಾಕಿರುವುದರಿಂದ ಅವರಿಗೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಡಿಯಲ್ಲಿ ದೇಶದ ಅಭಿವೃದ್ಧಿ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.
” ರಾಹುಲ್ ಗಾಂಧಿಯವರು ಅಪ್ರೌಢರಾಗಿರುವುದರಿಂದ ಅವರು ಕೇಂದ್ರ ಸರ್ಕಾರದ ಕೆಲಸಗಳನ್ನು ವಿರೋಧಿಸುತ್ತಾರೆ. ಅವರು ಇಟೆಲಿಯ ಕನ್ನಡಕ ಧರಿಸಿರುವುದರಿಂದ ಅವರಿಗೆ ದೇಶದ ಅಭಿವೃದ್ಧಿ ಕಾಣುವುದಿಲ್ಲ ಎಂದು ಚಂಡೀಗಢದ ರಾಮಲೀಲಾ ಮೈದಾನದಲ್ಲಿ ಬಿಜೆಪಿಯ ಬೂತ್ ಮಟ್ಟದ ನಾಯಕರ ರ್ಯಾಲಿಯಲ್ಲಿ ಹೇಳಿದ್ದಾರೆ.ಬಿಜೆಪಿ ಮಾತನಾಡುವ ಪ್ರಧಾನಿಯನ್ನು ದೇಶಕ್ಕೆ ನೀಡಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ವಿರುದ್ಧ ಟೀಕೆಗಳನ್ನು ಮುಂದುವರಿಸಿದ ಅಮಿತ್ ಷಾ, ರಾಹುಲ್ ಗಾಂಧಿಯವರು ಹೋದಲ್ಲೆಲ್ಲಾ ಬಿಜೆಪಿ ಸರ್ಕಾರ ನಮಗೆ ಏನು ಕೊಟ್ಟಿದೆ ಎಂದು ಕೇಳುತ್ತಾರೆ. ನಾವು ಮಾತನಾಡುವ ಪ್ರಧಾನಿಯನ್ನು ದೇಶಕ್ಕೆ ನೀಡಿದ್ದೇವೆ. ಪಾರದರ್ಶಕ ಸರ್ಕಾರ ನೀಡಿದ್ದೇವೆ. ವಿರೋಧ ಪಕ್ಷದವರು ನಮ್ಮ ವಿರುದ್ಧ ಭ್ರಷ್ಟಾಚಾರವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನಿಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಏನು ಕೊಟ್ಟಿರಿ ಎಂದು ರಾಹುಲ್ ಗಾಂಧಿಯವರು ನಮಗೆ ಉತ್ತರ ಕೊಡಬೇಕು. ಯುಪಿಎ-1 ಮತ್ತು ಯುಪಿಎ-2 ಅವಧಿಯಲ್ಲಿ ಏನು ಮಾಡಿದ್ದೀರಿ? ಕಾಂಗ್ರೆಸ್ ತನ್ನ 10 ವರ್ಷಗಳ ಆಡಳಿತದಲ್ಲಿ ಒಂದಲ್ಲೊಂದು ಹಗರಣದಲ್ಲಿ ಭಾಗಿಯಾಗಿತ್ತು ಎಂದು ಟೀಕಿಸಿದರು.
ಅಧಿಕ ಮುಖಬೆಲೆಯ ನೋಟುಗಳ ನಿಷೇಧದಿಂದ ದೇಶದ ಅರ್ಥ ವ್ಯವಸ್ಥೆ ಬಲಗೊಳ್ಳುತ್ತದೆ ಎಂದು ಪ್ರಧಾನಿ ಮೋದಿಯವರ ನಿರ್ಧಾರವನ್ನು ಶ್ಲಾಘಿಸಿದ ಅವರು, ದೇಶದ ಅರ್ಥವ್ಯವಸ್ಥೆ ಕ್ಯಾನ್ಸರ್ ನಿಂದ ಬಳಲುತ್ತಿತ್ತು. ಅದಕ್ಕೆ ಮೋದಿಯವರು ಸರ್ಜರಿ ಮಾಡಿದ್ದಾರೆ ಎಂದು ಹೇಳಿದರು. ಪ್ರಧಾನಿಯವರು ಕಪ್ಪು ಹಣದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದ ವಿರೋಧ ಪಕ್ಷದವರು ಈಗ ನೋಟುಗಳ ನಿಷೇಧ ಕ್ರಮವನ್ನು ವಿರೋಧಿಸುತ್ತಿರುವುದೇಕೆ ಎಂದು ಅಮಿತ್ ಷಾ ಪ್ರಶ್ನಿಸಿದರು.
ನೋಟುಗಳ ನಿಷೇಧದಿಂದಾಗಿ ಭಯೋತ್ಪಾದಕರಿಗೂ ತೊಂದರೆಯುಂಟಾಗಿದೆ. ಉಗ್ರಗಾಮಿ ಗುಂಪುಗಳು ಈಗ ನಿರ್ಗತಿಕವಾಗಿವೆ ಎಂದರು.

Comments are closed.