ರಾಷ್ಟ್ರೀಯ

ಮೀನು ವ್ಯಾಪಾರಿಗಳಿಂದ ನೋಟುಗಳಿಗಾಗಿ ಡಿಜಿಟಲ್ ಮೊರೆ

Pinterest LinkedIn Tumblr

manji_fish_dhamaka_6ಕೋಲ್ಕತ್ತಾ: ಒಂದು ವಾರದಿಂದ ಮಾರುಕಟ್ಟೆಗಳಲ್ಲಿ ನೋಟುಗಳ ಚಲಾವಣೆ ಇಳಿಮುಖದಿಂದಾಗಿ ಕೋಲ್ಕತ್ತಾ ಮೀನು ವ್ಯಾಪಾರಿಗಳು ಡಿಜಿಟಲ್ ಮೊರೆ ಹೋಗಿದ್ದಾರೆ. ನೂರಾರು ಮೀನಿನ ವ್ಯಾಪಾರಿಗಳು ಪೇಟಿಎಂ ಅಂತಹ ಇ-ವಾಲೆಟ್ ಗಳನ್ನು ಬಳಸಲು ಶುರು ಮಾಡಿದ್ದಾರೆ.

ಹೊಸ ನೋಟು ಚಲಾವಣೆಯ ಈ ಸಂದಿಗ್ದ ಪರಿಸ್ಥಿತಿಯಲ್ಲಿ, ಇ-ವಾಲೆಟ್ ಬಳಕೆಯಿಂದಾಗಿ ವ್ಯಾಪಾರದ ಮೇಲೆ ಆಗಿರುವ ಪರಿಣಾಮವನ್ನು ಕಡಿಮೆ ಮಾಡಿದೆ. 700 ಕ್ಕೂ ಹೆಚ್ಚು ಮೀನು ವ್ಯಾಪಾರಿಗಳು ಹೌರ, ಮಣಿಕ್ಟಲ, ಲೇಕ್ ಗಾರ್ಡನ್, ದಮ್ ದಮ್ ಮತ್ತು ಸಾಲ್ಟ್ ಲೇಕ್ ಮಾರುಕಟ್ಟೆಯಲ್ಲಿ ಇ – ವಾಲೆಟ್ ಬಳಸಲು ಶುರು ಮಾಡಿದ್ದಾರೆ.

ಈಗಾಗಲೇ 3,500 ರೂ. ಮೊತ್ತದ ಮೀನನ್ನು ಸಾಲದ ರೂಪದಲ್ಲಿ ಕೊಟ್ಟಿದ್ದೇನೆ ಹೀಗೆ ಮುಂದುವರೆದಲ್ಲಿ ಸಗಟು ಮಾರಾಟದಾರರಿಗೆ ಹಣ ಪಾವತಿ ಮಾಡಲು ಕಷ್ಟವಾಗುತ್ತದೆ ಎಂದು ಲೇಕ್ ಮಾರುಕಟ್ಟೆಯ ಮೀನಿನ ವ್ಯಾಪಾರಿ ರಾಜು ಬಾರ್ ತಿಳಿಸಿದ್ದಾರೆ.

ಮೊದಲಿಗೆ ಇ – ವಾಲೆಟ್ ಬಳಕೆದಾರರು ಕಡಿಮೆಯಿದ್ದರು. ದಿನ ಕಳೆದಂತೆ ಇ – ವಾಲೆಟ್ ಬಳಕೆದಾರರು ಹೆಚ್ಚುತ್ತಿದ್ದಾರೆ ಎಂದು ಮೀನಿನ ವ್ಯಾಪಾರಿ ಅಶೋಕ್ ಮೊಂಡಲ್ ತಿಳಿಸಿದ್ದಾರೆ. ಈಗ ಪ್ರತೀ ದಿನದ ವ್ಯಾಪಾರದಲ್ಲಿ ಶೇ.20 ರಷ್ಟು ಇ – ವಾಲೆಟ್ ಮೂಲಕ ಆಗುತ್ತಿದೆಯೆಂದು ಹಲವು ಮಾರುಕಟ್ಟೆ ವ್ಯಾಪಾರಿಗಳು ತಿಳಿಸಿದ್ದಾರೆ.

ನಾನು ಈ ಹಿಂದೆ ಪೆಟಿಎಂ ಮೂಲಕ ಮೊಬೈಲ್ ಬಿಲ್ ಪಾವತಿ, ಪಿಜ್ಜಾ ಖರೀದಿ ಮಾಡಿದ್ದೆ. ಇವತ್ತು ಮೀನನ್ನು ಮೀನಿನ ಮಾರುಕಟ್ಟೆಯಿಂದಲೇ ಪಡೆದಿರುವುದು ಆಶ್ಚರ್ಯವಾಗಿದೆ ಎಂದು ಗ್ರಾಹಕ ಪೌಲಾಮಿ ಮುಖರ್ಜಿ ಆನಿಮೇಶನ್ ಆರ್ಟಿಸ್ಟ ಸಂತೋಷ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವು ವ್ಯಾಪಾರಿಗಳು ಇ – ವಾಲೆಟ್ ಬಳಸಲು ಎರಡು ಕಾರಣಗಳಿಂದ ಹಿಂದು ಮುಂದು ನೋಡುತ್ತಿದ್ದಾರೆ. ಮೊದಲನೆಯದಾಗಿ ಗ್ರಾಹಕರು ಇ – ವಾಲೆಟ್ ಮೂಲಕ ವ್ಯಾಪಾರ ಮಾಡುತ್ತಾರೆ. ಆದರೆ ಕೆಲವು ಸಗಟು ಮಾರಾಟದಾರರು ಕೇವಲ ನೋಟುಗಳನ್ನು ತೆಗೆದುಕೊಳ್ಳುತ್ತಾರೆ ಇದಕ್ಕಾಗಿ ಬ್ಯಾಂಕ್, ಎಟಿಎಂ ಗಳ ಮುಂದೆ ಸರತಿ ಸಾಲಿನಲ್ಲಿ ಕಾಯಬೇಕಾಗುತ್ತದೆ. ಇನ್ನೊಂದು ಕಾರಣ ಇ – ವಾಲೆಟ್ ಹೇಗೆ ಕೆಲಸ ಮಾಡುತ್ತದೆಯೆಂದು ಕೆಲವು ವ್ಯಾಪಾರಿಗಳಿಗೆ ಗೊತ್ತಿಲ್ಲ ಎಂದು ಮೀನು ವ್ಯಾಪಾರಿ ಮೈಟಿ ಹೇಳಿದ್ದಾರೆ.

1000 ರೂ., 500 ರೂ ನೋಟುಗಳ ಹಿಂಪಡೆತದಿಂದ ಹೊಸ ನೋಟುಗಳ ಚಲಾವಣೆ ಕೋಲ್ಕತ್ತಾ ಮಾರುಕಟ್ಟೆಯಲ್ಲೂ ಕಡಿಮೆಯಾಗಿದೆ. ಗ್ರಾಹಕರ ಹತ್ತಿರ ಚಲಾವಣೆ ನೋಟುಗಳ ಲಭ್ಯತೆ ಕಡಿಮೆಯಿದೆ. ಹೀಗಾಗಿ ಮೀನಿನ ವ್ಯಾಪಾರವೇ ಪೂರ್ಣವಾಗಿ ಸಾಲದ ರೂಪದಲ್ಲಿ ನಡೆಯುತ್ತಿದೆ.

ನೋಟುಗಳ ಚಲಾವಣೆಯ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇ- ವಾಲೆಟ್ ಮೂಲಕ ಜನರು ಬೇಗ ಮತ್ತೆ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು ಹಾಗಾಗಿ ಜನ ಇ-ವಾಲೆಟ್ ಗಳ ಮೊರೆ ಹೋಗುತ್ತಿದ್ದಾರೆಯೆಂದು ಪೇಟಿಎಂ ಜನರಲ್ ಮ್ಯಾನೆಜರ್ ನಿಶಿತ್ ಸಿನ್ಹಾ ಹೇಳಿದ್ದಾರೆ.

Comments are closed.