ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ 500-1000 ನೋಟುಗಳ ನಿಷೇಧ ಮಾಡಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಮಧ್ಯೆ ವ್ಯಕ್ತಿಯೊರ್ವ ದೆಹಲಿ ಪೊಲೀಸರಿಗೆ ಕರೆ ಮಾಡಿ ಮೋದಿ ಅವರ ಕೊಲೆಗೆ ಸಂಚು ನಡೆಯುತ್ತಿದೆ ಎಂದು ಹೇಳಿದ್ದಾನೆ.
ಮೋದಿ ಕೊಲೆಗೆ ಸಂಚು ನಡೆಯುತ್ತಿದೆ ಎಂಬ ಕರೆ ಹಿನ್ನೆಲೆ ದೆಹಲಿ ಪೊಲೀಸರು ವ್ಯಾಪಕ ತನಿಖೆ ಕೈಗೊಂಡಿದ್ದಾರೆ. ಆದರೆ ಕೊಲೆ ಯತ್ನದ ಸಂಚಿನ ಬಗ್ಗೆ ಯಾವುದೇ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ. ಹೀಗಾಗಿ ಇದೊಂದು ಹುಸಿ ಕರೆ ಆಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬುರಾರಿ ನಿವಾಸಿ ಎಂದು ಹೇಳಿಕೊಂಡು ದಿನೇಶ್ ಕುಮಾರ್ ಎಂಬಾತ ಬುಧವಾರ ಮಧ್ಯಾಹ್ನ 11.30ರ ಸುಮಾರಿಗೆ ದೆಹಲಿ ಪೊಲೀಸರಿಗೆ ಮೋದಿ ಅವರ ಕೊಲೆ ಸಂಚು ರೂಪಿಸಲಾಗಿದೆ ಎಂದು ಕರೆ ಮಾಡಿದ್ದ. ಮೋದಿ ಅವರನ್ನು ಕೊಲ್ಲುವುದಾಗಿ ಜನರ ಗುಂಪೊಂದು ಹೇಳಿಕೊಳ್ಳುತ್ತಿದ್ದುದ್ದನ್ನು ತಾನು ಕೇಳಿಸಿಕೊಂಡಿದ್ದೇನೆ ಎಂದು ಹೇಳಿದ್ದ. ಬಳಿಕ ಪೊಲೀಸರ ತನಿಖೆ ವೇಳೆ ಫೋನ್ ಕರೆ ಬಂದಿದ್ದು ದಿಲ್ ಷಾದ್ ಕಾಲನಿಯಿಂದ ಎಂಬುದನ್ನು ಪತ್ತೆ ಹಚ್ಚಿದರು.
ಕರೆ ಮಾಡಿದ ದಿನೇಶ್ ಕುಮಾರ್ ಎಂಬುವರನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು ಪತ್ತೆ ಹಚ್ಚಿ ತೀವ್ರ ವಿಚಾರಣೆ ನಡೆಸಿದಾಗ ಆತ ನಾನು ಅಂಗಡಿ ಮುಂದೆ ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ತುರ್ತಾಗಿ ಕರೆ ಮಾಡಬೇಕು ಎಂದು ಮೊಬೈಲ್ ತೆಗೆದುಕೊಂಡ ಎಂದು ಹೇಳಿದ್ದಾನೆ. ಇದನ್ನು ಅಂಗಡಿಯವನು ಮಾಲೀಕ ಇದನ್ನು ದೃಢೀಕರಿಸಿದ್ದಾನೆ.
ಇತ್ತೀಚೆಗಷ್ಟೇ ಗೋವಾದಲ್ಲಿ ಸಾರ್ವಜನಿಕ ಭಾಷಣದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಮಗೆ ಪ್ರಾಣ ಬೆದರಿಕೆ ಇರುವುದಾಗಿ ಹೇಳಿಕೊಂಡಿದ್ದರು.
Comments are closed.