ರಾಷ್ಟ್ರೀಯ

ನೋಟ್ ನಿಷೇಧ ವಿರೋಧಿಸಿ ಕೇರಳ ಮುಖ್ಯಮಂತ್ರಿ ಆರ್ ಬಿಐ ಮುಂದೆ ಧರಣಿ

Pinterest LinkedIn Tumblr

pinarayತಿರುವನಂತಪುರಂ: ಕೇಂದ್ರ ಸರ್ಕಾರದ ನೋಟ್ ನಿಷೇಧ ನಿರ್ಧಾರ ವಿರೋಧಿಸಿ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ತಿರುವನಂತಪುರಂನಲ್ಲಿರುವ ಆರ್ ಬಿಐ ಕಚೇರಿ ಮುಂದೆ ಒಂದು ದಿನ ಧರಣಿ ನಡೆಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ಕೇರಳ ಮುಖ್ಯಮಂತ್ರಿ ವಿಜಯನ್ ಅವರು, ನರೇಂದ್ರ ಮೋದಿ ಸರ್ಕಾರ ಕೇರಳದ ಸಹಕಾರಿ ವಲಯವನ್ನು ನಾಷ ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ನೋಟ್ ನಿಷೇಧ ಕ್ರಮದಿಂದಾಗಿ ಕೇರಳ ಆರ್ಥಿಕತೆ ಹಾಳಾಗಿದೆ ಎಂದ ಕೇರಳ ಸಿಎಂ, ಸಹಾಕರಿ ಬ್ಯಾಂಕ್ ಗಳಲ್ಲಿ ಕೇವಲ ಡೆಪೊಸಿಟ್ ಅವಕಾಶ ನೀಡಿ, ನೋಟ್ ಬದಲಾವಣೆಗೆ ಅವಕಾಶ ನೀಡದ ಆರ್ ಬಿಐ ಕ್ರಮವನ್ನು ಖಂಡಿಸಿದರು.
ಇನ್ನು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು, ನೋಟ್ ನಿಷೇಧ ನಿರ್ಧಾರ ಸಂಪೂರ್ಣ ಅಸಂಬದ್ಧ ಎಂದರು. ಅಲ್ಲದೆ ಕಪ್ಪು ಹಣ ಹಾಗೂ ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಇದು ಸಂಪೂರ್ಣ ವಿಫಲವಾಗಿದೆ ಎಂದರು.

Comments are closed.