ರಾಷ್ಟ್ರೀಯ

ಸುಷ್ಮಾಗೆ ಕಿಡ್ನಿ ವೈಫಲ್ಯ: ದಾನ ನೀಡಲು ಮುಂದಾದ ಜನತೆ

Pinterest LinkedIn Tumblr

sushma-newನವದೆಹಲಿ: ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್‌ ಅವರಿಗೆ ಕಿಡ್ನಿದಾನ ಮಾಡಲು ಹಲವು ಮಂದಿ ಸಿದ್ಧರಿರುವುದಾಗಿ ಸುಷ್ಮಾ ಸ್ವರಾಜ್‌ರವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಅನಾರೋಗ್ಯದ ಕುರಿತ ಮಾಹಿತಿಯನ್ನು ಮಂಗಳವಾರ ಸುಷ್ಮಾ ಸ್ವರಾಜ್‌ ಟ್ವೀಟರ್‌ನಲ್ಲಿ ಬರೆದು ಹಂಚಿಕೊಂಡಿದ್ದರು. ತಮ್ಮ ಟ್ವೀಟ್‌ ನಲ್ಲಿ ಅವರು ತಾವು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು, ಡಯಾಲಿಸೀಸ್‌ಗೆ ಒಳಗಾಗುತ್ತಿದ್ದೇನೆ ಎಂದು ದೇಶವಾಸಿಗಳಿಗೆ ತಿಳಿಸಿದ್ದರು.

ಇದರ ಬೆನ್ನಲ್ಲೇ ಹಲವು ಮಂದಿ ‘ತಮ್ಮ ಅಭ್ಯಂತರವೇನು ಇಲ್ಲವೆಂದರೆ ನಾವು ನಿಮಗೆ ಕಿಡ್ನಿ ದಾನ ಮಾಡಲು ಸಿದ್ಧರಿದ್ದೇವೆ. ಈ ದೇಶಕ್ಕಾಗಿ ಶ್ರಮಿಸುತ್ತಿರುವ ನಿಮಗಾಗಿ ತಾವು ಕಿಡ್ನಿ ನೀಡುತ್ತೇವೆ, ನಿಮ್ಮ ಅವಶ್ಯಕತೆ ದೇಶಕ್ಕಿದೆ. ಬೇಗನೆ ಆರೋಗ್ಯವಾಗಿ ಹಿಂದಿರುಗಿ’ ಎಂದು ಬರೆದುಕೊಳ್ಳುವ ಮೂಲಕ ಸುಷ್ಮಾ ಸಮಸ್ಯೆಯ ಬಗ್ಗೆ ಅಭಯ ನೀಡಿದ್ದಾರೆ.

ಜೊತೆಗೆ ತಮ್ಮ ಸಂಪರ್ಕ ಸಂಖ್ಯೆಯನ್ನೂ ಬರೆದು ತಮ್ಮನ್ನು ಸಂಪರ್ಕಿಸಲು ಸೂಚಿಸಿದ್ದಾರೆ.

ಮೋದಿ ಸಚಿವ ಸಂಪುಟದ ಅತ್ಯಂತ ಪ್ರಭಾವಿ ಸಚಿವರಲ್ಲೊಬ್ಬರಾಗಿರುವ 64 ವರ್ಷದ ಸುಷ್ಮಾ ಸ್ವರಾಜ್‌ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

Comments are closed.