ರಾಷ್ಟ್ರೀಯ

ಅಗತ್ಯ ನೋಟುಗಳ ಸಂಗ್ರಹ ಬೇಡ, ಸಾಕಷ್ಟು ನೋಟು ಪೂರೈಕೆ: ಆರ್‌ಬಿಐ

Pinterest LinkedIn Tumblr

RBIWEBಮುಂಬೈ: ರಾಷ್ಟ್ರಾದ್ಯಂತ ಬ್ಯಾಂಕ್‌ಗಳ ಮುಂದೆ ನಿಷೇಧಿತ ನೋಟು ಬದಲಾವಣೆಗೆ ಜನಸಂದಣಿ ಇದ್ದು, ಜನರ ನಿಯಂತ್ರಣಕ್ಕೆ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಆದ್ದರಿಂದ, ನಾಗರಿಕರು ಅಗತ್ಯ ನೋಟುಗಳ ಹೆಚ್ಚಿನ ಸಂಗ್ರಹಕ್ಕೆ ಮುಂದಾಗಬಾರದು. ಸಾಕಷ್ಟು ನೋಟು ಪೂರೈಕೆ ಮಾಡಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ಗುರುವಾರ ಹೇಳಿದೆ.

ಸರ್ಕಾರ ಹಣ ಪಡೆಯುವಲ್ಲಿ ಇದ್ದ ಕೆಲ ನಿರ್ಭಂದಗಳನ್ನು ಸಡಿಲಿಸಿದ್ದು, ರೈತರು, ಮದುವೆ ಕಾರ್ಯಕ್ಕೆ ಹೆಚ್ಚಿನ ಹಣ ಪಡೆಯಲು ಅವಕಾಶ ಕಲ್ಪಿಸಿದೆ. ಜತೆಗೆ, ಚಲಾವಣೆಯಿಂದ ಹಿಂಪಡೆದ ನೋಟುಗಳ ಬದಲಾವಣೆಗೆ ಇದ್ದ ಮಿತಿಯನ್ನು ₹4,500ರಿಂದ ₹2,000ಕ್ಕೆ ಇಳಕೆ ಮಾಡಿದೆ.

ಇದರ ಬೆನ್ನಲ್ಲೇ ಆರ್‌ಬಿಐ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದು, ನೋಟುಗಳ ಮುದ್ರಣವನ್ನು ಎರಡು ತಿಂಗಳ ಹಿಂದೆಯೇ ಹೆಚ್ಚಿಸಲಾಗಿದೆ. ಸಾಕಷ್ಟು ಪ್ರಮಾಣ ನೋಟುಗಳು ಲಭ್ಯವಾಗಲಿವೆ. ಜನರು ಆತಂಕ ಪಟ್ಟು ಹೆಚ್ಚು ಹೆಚ್ಚು ನೋಟುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಮುಂದಾಗಬಾರದು ಎಂದು ಹೇಳಿದೆ.

Comments are closed.